February 17, 2026
Tuesday, February 17, 2026
spot_img

ಬಲೂಚಿಸ್ತಾನ ಅಶಾಂತಿ | ಭಾರತದ ಮೇಲೆ ಬೆರಳು ತೋರಿಸೋದು ಪಾಕ್ ನ ಹಳೆಯ ಚಾಳಿ ಎಂದ ರಣಧೀರ್ ಜೈಸ್ವಾಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಲೂಚಿಸ್ತಾನದಲ್ಲಿ ಅಶಾಂತಿ ಸೃಷ್ಟಿಸಲು ಭಾರತ ಕೈಜೋಡಿಸಿದೆ ಎಂಬ ಪಾಕಿಸ್ತಾನದ ಆರೋಪಗಳನ್ನು ಭಾರತ ತಳ್ಳಿಹಾಕಿದೆ. ಇವು ಇಸ್ಲಾಮಾಬಾದ್ ತನ್ನ ಆಂತರಿಕ ಸಮಸ್ಯೆಗಳು ಮತ್ತು ಆಡಳಿತ ವೈಫಲ್ಯಗಳಿಂದ ಗಮನ ತಿರುಗಿಸಲು ಬಳಸುತ್ತಿರುವ ಹಳೆಯ ತಂತ್ರಗಳೇ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.

ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ಪಾಕಿಸ್ತಾನದ ಆರೋಪಗಳು ಸಂಪೂರ್ಣ ಆಧಾರರಹಿತವಾಗಿದ್ದು, ಹಿಂಸಾತ್ಮಕ ಘಟನೆಗಳು ಸಂಭವಿಸಿದಾಗಲೆಲ್ಲಾ ಇಂತಹ ಹೇಳಿಕೆಗಳನ್ನು ಪುನರಾವರ್ತಿಸುವುದು ಪಾಕಿಸ್ತಾನದ ರೂಢಿ ಎಂದರು.

ಪಾಕಿಸ್ತಾನ ಸೇನೆ ಮತ್ತು ಆಡಳಿತವು ಹೊರಗಿನವರ ಮೇಲೆ ಆರೋಪ ಹೊರಿಸುವ ಬದಲು, ಅಲ್ಲಿನ ಜನರ ದೀರ್ಘಕಾಲದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಭಾರತ ಸಲಹೆ ನೀಡಿದೆ.

ಈ ನಡುವೆ ಬಲೂಚಿಸ್ತಾನದ ಹಲವು ಪ್ರದೇಶಗಳಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆಗಳು ನಡೆದಿದ್ದು, ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ತೀವ್ರ ಸಂಘರ್ಷಗಳು ನಡೆದಿವೆ ಎಂಬ ವರದಿಗಳು ಹೊರಬಿದ್ದಿವೆ. ಈ ಬೆಳವಣಿಗೆಗಳ ಹೊಣೆ ಹೊರಗಿನ ಶಕ್ತಿಗಳ ಮೇಲಿದೆ ಎಂಬ ಪಾಕಿಸ್ತಾನದ ಆರೋಪಗಳನ್ನು ಭಾರತ ಸಂಪೂರ್ಣವಾಗಿ ತಿರಸ್ಕರಿಸಿ, ಸತ್ಯವನ್ನು ಮರೆಮಾಚುವ ಪ್ರಯತ್ನ ಎಂದು ಹೇಳಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !