ಬಾಲ್ಟಿಮೋರ್ ದುರಂತ: ರಕ್ಷಣಾ ಕಾರ್ಯಾಚರಣೆ ಅಂತ್ಯ, ಭಾರತೀಯ ಸಿಬ್ಬಂದಿಗೆ ಥ್ಯಾಂಕ್ಸ್ ಹೇಳಿದ ಬೈಡೆನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲ್ಟಿಮೋರ್ ಸೇತುವೆ ದುರಂತ ಘಟಿಸಿದ 18 ತಾಸುಗಳ ಬಳಿಕ ಶೋಧ ಕಾರ್ಯ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಯುಎಸ್ ಕೋಸ್ಟ್ ಗಾರ್ಡ್, ಮೇರಿಲ್ಯಾಂಡ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕವಿದಿರುವ ಕತ್ತಲು ಹಾಗೂ ಅವಶೇಷಗಳಿಂದ ತುಂಬಿದ ಈ ಸ್ಥಳದಲ್ಲಿ ಮುಳುಗುಗಾರರ ತಂಡ ಅಪಾಯಕಾರಿ ಪರಿಸ್ಥಿತಿ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ಬಂದರು ಮತ್ತೆ ಕಾರ್ಯಾರಂಭ ಮಾಡಲು ಹಾಗೂ ಸೇತುವೆಯ ಶೀಘ್ರ ಪುನರ್ ನಿರ್ಮಾಣಕ್ಕೆ ಸೂಚಿಸಲಾಗಿದೆ. ಹಡಗು ನಿಯಂತ್ರಣ ಕಳೆದುಕೊಂಡಿರುವ ಬಗ್ಗೆ ಅಧಿಕಾರಿಗಳನ್ನು ಎಚ್ಚರಿಸಲು ಸಾಧ್ಯವಾಗಿದ್ದಕ್ಕಾಗಿ ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿಗೆ ಧನ್ಯವಾದ ಎಂದು ಹೇಳಿದ್ದಾರೆ. ಬಾಲ್ಟಿಮೋರ್ಗೆ ಆದಷ್ಟು ಬೇಗ ಭೇಟಿ ನೀಡುವುದಾಗಿಯೂ ಇದೇ ಸಂದರ್ಭ ಬೈಡನ್ ಭರವಸೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!