ಶಿವಮೊಗ್ಗದಲ್ಲಿ ರಾತ್ರಿ ಬೈಕ್ ಸಂಚಾರ ನಿಷೇಧ: ಇಬ್ಬರ ಓಡಾಟಕ್ಕೆ ಬ್ರೇಕ್

ಹೊಸದಿಗಂತ ವರದಿ ಶಿವಮೊಗ್ಗ:

ಚಾಕು ಇರಿತದಿಂದ ಉದ್ವಗ್ನಗೊಂಡಿರುವ ಕಾರಣದಿಂದಾಗಿ ಶಿವಮೊಗ್ಗ ನಗರದಲ್ಲಿ ಆಗಸ್ಟ್ 18ರವರೆಗೆ ನಿಷೇಧಾಜ್ಞೆಯನ್ನು ಹೇರಲಾಗಿದೆ. ಅಲ್ಲಿವರೆಗೆ ಯಾವುದೇ ಸಭೆ-ಸಮಾರಂಭ, ಮೆರವಣಿಗೆ ಮಾಡದಂತೆ ನಿಷೇಧಿಸಲಾಗಿದೆ.

ಇದರ ಜೊತೆಗೆ ಎರಡು ಪ್ರಮುಖ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಆಗಸ್ಟ್ 18ರವರೆಗೆ ನಿಷೇಧಾಜ್ಞೆ ಅವಧಿಯಲ್ಲಿ ರಾತ್ರಿ 9 ರಿಂದ ಬೆಳಗಿನ ಜಾವ 5 ಗಂಟೆವರೆಗೆ ದ್ವಿಚಕ್ರ ವಾಹನ ಸಂಚಾರಕ್ಕೆ ನಿಷೇಧಿಸಲಾಗಿದೆ. ತುರ್ತು ಸೇವೆಗಳಿಗೆ ಮಾತ್ರ ಅವಕಾಶ ನೀಡಿದ್ದು, ಇದರ ಜೊತೆಗೆ ದ್ವಿಚಕ್ರ ವಾಹನದಲ್ಲಿ ಇಬ್ಬರು ಸಂಚರಿಸುವುದನ್ನು ನಿಷೇಧಿಸಿದ್ದಾರೆ. ದ್ವಿಚಕ್ರ ವಾಹನದಲ್ಲಿ 40 ವರ್ಷ ಮೇಲ್ಪಟ್ಟವರು, ರೋಗಿಗಳನ್ನು ಕರೆದೊಯ್ಯಲು ಮಾತ್ರ ಅವಕಾಶ ನೀಡಲಾಗಿದೆ. ಇನ್ನು ವಾಹನಗಳ ನಿರಂತರ ತಪಾಸಣೆಗೆ ಎಡಿಜಿಪಿ ಅಲೋಕ್ ಕುಮಾರ್ ಸೂಚನೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!