ಎಸ್.ಡಿಪಿಐ, ಪಿಎಫ್ಐ ಸಂಘಟನೆ ನಿಷೇಧಿಸಿ: ಲಕ್ಷ್ಮಿಕಾಂತ ಸ್ವಾಧಿ ಆಗ್ರಹ

ಹೊಸದಿಗಂತ ವರದಿ, ಕಲಬುರಗಿ

ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ಗಳಿಗೆ ಪ್ರಮುಖ ಕಾರಣವಾಗಿರುವ ದೇಶದ್ರೋಹಿ ಸಂಘಟನೆಗಳಾದ ಎಸ್.ಡಿ.ಪಿ.ಐ ಮತ್ತು ಪಿ.ಎಫ್.ಐ. ಸಂಘಟನೆಗಳನ್ನು ನಿಷೇಧಿಸಬೇಕೆಂದು ಹಿಂದೂ ಜಾಗೃತಿ ಸೇನೆಯ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ ಸ್ವಾಧಿ ಆಗ್ರಹಿಸಿದರು.

ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮೂಲಕ ರಾಜ್ಯದ ಗೃಹ ಸಚಿವರಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಹಾಗೂ ಬೇರೆ ರಾಜ್ಯಗಳಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಗುರಿಯಾಗಿಸಿಕೊಂಡು ಹತ್ಯೆ ಮಾಡುತ್ತಿರುವುದು ಖೇದಕರ ಸಂಗತಿಯಾಗಿದೆ ಎಂದರು.

ಸ್ಲಿಪ್ಪರ್ ಸೆಲಗಳ ಮೇಲೆ ದೇಶಾದ್ಯಂತ ಅನೇಕ ದಾಳಿಗಾಳ ನಡುವೆ ಇಂಡಿಯಾ ಟುಡೇ ಬಿತ್ತರಿಸಿರುವ ವರದಿಯೊಂದು ಆತಂಕಕಾರಿ ಮಾಹಿತಿಯನ್ನು ಹೊರಹಾಕಿದ್ದು, ಸರ್ಕಾರಿ ಸಂಸ್ಥೆಗಳಿಂದ ತಪ್ಪಿಸಿಕೊಳ್ಳಲು ಮತ್ತು ತನ್ನ ಕಾರ್ಯಸೂಚಿಯನ್ನು ಹರಡಲು ಅನೇಕ ಜಾಲಗಳನ್ನು ಹರಡುತಿದ್ದು ಬೇರೆ ಬೇರೆ ಹೆಸರಿನಲ್ಲಿ ಏಜೆನ್ಸಿಯನ್ನು ಅದು ಪ್ರಾರಂಭಿಸಿದೆ ಎಂದು ಹೇಳಿದರು.

ಹೀಗಾಗಿ ಇಂತಹ ದೇಶದ್ರೋಹಿ ಸಂಘಟನೆಗಳನ್ನು ತಕ್ಷಣವೇ ರಾಜ್ಯದಲ್ಲಿ ನಿಷೇಧಿಸಬೇಕು. ಇಲ್ಲದೆ ಹೋದಲ್ಲಿ ಸಂಘಟನೆಗಳು ಮುಂದೆ ನಮ್ಮ ದೇಶಕ್ಕೆ ಕಂಟಕ ವಾಗುವುದರಲ್ಲಿ ಬೇರೆ ಮಾತಿಲ್ಲ. ಹಿಂದೂ ವಿರೋಧಿ ಕಾರ್ಯಚಟುವಟಿಕೆಗಳನ್ನು ಮಾಡುತ್ತಿರುವುದು. ಹಿಂದೂ ಕಾರ್ಯಕರ್ತರ ಕಗ್ಗೋಲೆ ಮಾಡುತ್ತಿರುವುದನ್ನು ಹಿಂದೂ ಜಾಗೃತಿ ಸೇನೆ ಉಗ್ರವಾಗಿ ಖಂಡಿಸುತ್ತೆ ತಕ್ಷಣವೇ ರಾಜ್ಯದಲ್ಲಿ ಕೂಡಲೇ ಈ ಸಂಘಟನೆಗಳನ್ನು ನಿಷೇಧಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂತೋಷ ಸೊನವಾಣೆ, ತನೀಷ ಗಾಜರ, ದಶರಥ ಪಿ, ಮಹಾದೇವ ಕೊಟನೂರ, ಪ್ರಕಾಶ ವಾಗಮೋರೆ, ಕೇದಾರನಾಥ ಕಂತಿ, ಪವನ ಕದಮ್, ಚಿದಾನಂದ ಸ್ವಾಮಿ, ರಾಜು ಕಮಲಾಪೂ,ಶುಭಂ ಪವಾರ , ಸೋಮು ತಾಳಿಕೋಟ್, ಉದಯ ಕುಮಾರ, ಸುನೀಲ ರಾಠೋಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!