Thursday, December 1, 2022

Latest Posts

ಫುಟ್ಬಾಲ್‌ ಆಟಗಾರರಿದ್ದ ಮೈದಾನದಲ್ಲಿ ಬಾಳೆಹಣ್ಣು ಎಸೆದ ವಿಡಿಯೋ ವೈರಲ್: ವ್ಯಾಪಕ ಟೀಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬ್ರೆಜಿಲಿಯನ್ ಫುಟ್ಬಾಲ್ ಆಟಗಾರ ರಿಚೆಲಿಯು ಅವರನ್ನು ಗಮನದಲ್ಲಿಟ್ಟುಕೊಂಡು ಅವರಿದ್ದ ಮೈದಾನಕ್ಕೆ ಯಾರೋ ಬಾಳೆಹಣ್ಣು ಎಸೆದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಪ್ಯಾರಿಸ್‌ನಲ್ಲಿ ನಡೆದ ಪಂದ್ಯದಲ್ಲಿ ಬ್ರೆಜಿಲ್ 5-1 ಗೋಲುಗಳಿಂದ ಉತ್ತರ ಆಫ್ರಿಕಾದ ಟುನೀಶಿಯಾವನ್ನು ಸೋಲಿಸಿತ್ತು.

ಬ್ರೆಜಿಲ್ ಫುಟ್ಬಾಲ್ ಆಟಗಾರ ರಿಚಾಲಿಸನ್ ಆಟದ ವೇಳೆ ಎರಡು ಗೋಲು ಬಾರಿಸುತ್ತಿದ್ದಂತೆ ತಂಡದ ಎಲ್ಲ ಆಟಗಾರರು ಒಂದೆಡೆ ಸೇರಿ ಸಂಭ್ರಮಿಸಿದರು. ಅದೇ ಸಮಯಕ್ಕೆ ಯಾರೋ ಗ್ಯಾಲರಿಯಿಂದ ಅವರ ಬಳಿಗೆ ಬಾಳೆ ಹಣ್ಣನ್ನು ಎಸೆದಿದ್ದಾರೆ. ಅದನ್ನು ಕಂಡ ಮತ್ತೊಬ್ಬ ಆಟಗಾರ ಅದನ್ನು ಕಾಲಿನಿಂದ ಪಕ್ಕಕ್ಕೆ ತಳ್ಳಿದರು. ಈ ಘಟನೆ ಈಗ ಚರ್ಚಾಸ್ಪದವಾಗಿದೆ. ಬ್ರೆಜಿಲಿಯನ್ ಫುಟ್ಬಾಲ್ ಫೆಡರೇಶನ್ ಕೂಡ ತಮ್ಮ ಆಟಗಾರರ ಮೇಲೆ ಬಾಳೆಹಣ್ಣುಗಳನ್ನು ಎಸೆದಿದ್ದನ್ನ ಆಕ್ಷೇಪಿಸಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ.

ಈ ಘಟನೆಯ ಬಗ್ಗೆ ತಿಳಿದು ಆಘಾತವಾಗಿರುವುದಾಗಿ ಒಕ್ಕೂಟದ ಅಧ್ಯಕ್ಷ ಎಡ್ನಾಲ್ಡೊ ರಾಡ್ರಿಗಸ್ ಹೇಳಿಕೆ ನೀಡಿದ್ದಾರೆ. ಮತ್ತೊಂದೆಡೆ ಕ್ರೀಡಾಂಗಣದ ಭದ್ರತಾ ಸಿಬ್ಬಂದಿಗೆ ಬಾಳೆಹಣ್ಣು ಎಸೆದವರು ಯಾರು ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಬ್ರೆಜಿಲ್ ಮಾಧ್ಯಮಗಳು ಟೀಕಿಸಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!