October 12, 2026
Monday, October 12, 2026
spot_img

ಬಂಡೆ ಜೆಲ್ಲಿ ಪುಡಿ ಪುಡಿಯಾಗೋ ಎಲ್ಲಾ ಸೂಚನೆ ಕಾಣ್ತಾ ಇದೆ: ಬಿಜೆಪಿ ವ್ಯಂಗ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಚಿವ ರಾಮಲಿಂಗಾರೆಡ್ಡಿ ರಾಜೀನಾಮೆ ಬೆನ್ನಲ್ಲೇ ಬಿಜೆಪಿ ಕಾಂಗ್ರೆಸ್‌ ಸರ್ಕಾರ ಈಗಿನ ಸ್ಥಿತಿಯನ್ನು ವ್ಯಂಗ್ಯ ಮಾಡಿದೆ.

ಕಾಂಗ್ರೆಸ್ ಆಂತರಿಕ ಬಿಕ್ಕಟ್ಟನ್ನು ಲೇವಡಿ ಮಾಡಿರುವ ಬಿಜೆಪಿ, ಪಿಚ್ಚರ್‌ ಅಭಿ ಬಾಕಿ ಹೈ..! ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ರಾಮಲಿಂಗಾ ರೆಡ್ಡಿ ಅವರು ಇಂಟರ್‌ವೆಲ್‌ ಸಿಎಂ ಡಿಕೆಶಿವಕುಮಾರ್‌ ಅವರ ಅವಧಿಯಲ್ಲೂ ಕಿತ್ತಾಟ ಮುಂದುವರಿಯಲಿದೆ ಎಂಬ ದೊಡ್ಡ ಸಂದೇಶ ರವಾನಿಸಿದಂತಿದೆ ಎಂದು ಟೀಕಿಸಿದೆ.

ಸರ್ಕಾರ ಆರಂಭದಲ್ಲೇ ಆಂತರಿಕ ಕಚ್ಚಾಟಗಳಲ್ಲೇ ಮುಳುಗುವ ಮುನ್ಸೂಚನೆ ಈಗಲೇ ಸಿಕ್ಕಿರುವಾಗ, ಇನ್ನು ರಾಜ್ಯದ ಹಳಿತಪ್ಪಿರುವ ಆಡಳಿತ ಸರಿದಾರಿಗೆ ಹೋಗಬಹುದು ಎನ್ನುವುದನ್ನು ಈ ನಾಡಿನ ಜನ ನಿರೀಕ್ಷಿಸಲು ಸಾಧ್ಯವೇ ಎಂದು ತಮಾಷೆ ಮಾಡಿದೆ.

ಈ ಒಳಪೆಟ್ಟು ಯಾರದ್ದು ಎಂದು ಗೊತ್ತಿಲ್ಲ. ಅದನ್ನು ತಿಳಿದುಕೊಳ್ಳುವ ಮುನ್ನವೇ ಬಂಡೆ ಜೆಲ್ಲಿಪುಡಿಯಾಗುತ್ತದೆ ಎಂದು ಪೋಸ್ಟ್‌ ಮಾಡಿದೆ.

Must Read