ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ವಾತಂತ್ರ್ಯ ದಿನದಂದು ಬಹುವರ್ಣದ ಬಂಧನಿ ಮುದ್ರಣ ಪೇಟವನ್ನು ಧರಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಎಲ್ಲರ ಗಮನ ಸೆಳೆದರು. ಐತಿಹಾಸಿಕ ಕೆಂಪು ಕೋಟೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಗಾಗಿ ಬಿಳಿ ಕುರ್ತಾ ಮತ್ತು ಬಹುವರ್ಣದ ರಾಜಸ್ಥಾನಿ ಬಂಧನಿ ಪ್ರಿಂಟ್ ಪೇಟವನ್ನು ಧರಿಸಿದ್ದರು.
ಪ್ರಧಾನಿಯಾಗಿ ತಮ್ಮ 10ನೇ ಸ್ವಾತಂತ್ರ್ಯ ದಿನದ ಭಾಷಣಕ್ಕಾಗಿ, ಮೋದಿ ಹಳದಿ, ಹಸಿರು ಮತ್ತು ಕೆಂಪು ಬಣ್ಣದ ಉದ್ದನೆಯ ಬಾಲದಂತಿರುವ ಪೇಟ, ಬಿಳಿ ಕುರ್ತಾ ಹಾಗೂ ಕಪ್ಪು ವಿ-ನೆಕ್ ಜಾಕೆಟ್ ಅನ್ನು ಧರಿಸಿ ಎಲ್ಲರ ಗಮನ ಸೆಳೆದರು.
ಇದು 2014 ರಿಂದ ಪ್ರತಿ ಸ್ವಾತಂತ್ರ್ಯ ದಿನದಂದು ಪ್ರಧಾನಿ ಮೋದಿ ವರ್ಣರಂಜಿತ ಪೇಟಗಳನ್ನು ಧರಿಸುವ ಸಂಪ್ರದಾಯಕ್ಕೆ ಅನುಗುಣವಾಗಿದೆ.
ಕಳೆದ ವರ್ಷ, ಅವರು ಕೆಂಪು ಮಾದರಿ ಮತ್ತು ಉದ್ದನೆಯ ಬಾಲವನ್ನು ಹೊಂದಿರುವ ಕೇಸರಿ ಪೇಟವನ್ನು ಆಯ್ಕೆ ಮಾಡಿಕೊಂಡಿದ್ದರು. ಪ್ರತಿ ವರ್ಷ ಪೇಟ ಧರಿಸುವ ಸಂಪ್ರದಾಯ ಮಾತ್ರ ಬದಲಾಗದೇ ಅನುಸರಿಸಿಕೊಂಡು ಬರುತ್ತಿದ್ದಾರೆ.