August 10, 2026
Monday, August 10, 2026
spot_img

ಬಂಡೀಪುರ ಸಫಾರಿ ಇನ್ಮುಂದೆ ದುಬಾರಿ: ಸೆಪ್ಟೆಂಬರ್‌ ಒಂದರಿಂದ ಹೊಸ ಶುಲ್ಕ ಜಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ದರ ಏರಿಕೆಯ ಬಿಸಿ ತಗುಲಿದೆ.

ಸೆಪ್ಟೆಂಬರ್ 1, 2026ರಿಂದ ಜಾರಿಗೆ ಬರುವಂತೆ ಸಫಾರಿ, ಖಾಸಗಿ ವಾಹನ, ಕ್ಯಾಮೆರಾ ಬಳಕೆ ಸೇರಿದಂತೆ ಹಲವು ಸೇವೆಗಳ ಶುಲ್ಕವನ್ನು ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ. ಹೊಸ ದರಗಳ ಪ್ರಕಾರ ಹಲವು ಸೇವೆಗಳ ಶುಲ್ಕವು ಹಿಂದಿನದರಿಗಿಂತ ಗಣನೀಯವಾಗಿ ಏರಿಕೆಯಾಗಿದ್ದು, ಬಂಡೀಪುರ ಸಫಾರಿ ಪ್ರವಾಸ ಮಧ್ಯಮ ವರ್ಗದ ಕುಟುಂಬಗಳಿಗೆ ಮತ್ತಷ್ಟು ದುಬಾರಿಯಾಗಲಿದೆ.

ಬಸ್‌, ಜೀಪ್‌ ಸಫಾರಿಯ ಪ್ರವೇಶ ದರವನ್ನು ಹೆಚ್ಚಿಸಲಾಗಿದೆ.ಇದೇ ವೇಳೆ ಖಾಸಗಿ ವಾಹನಗಳ ಪ್ರವೇಶ ಶುಲ್ಕ, ಬೋಟ್ ಸೇವೆ, ಕ್ಯಾಮೆರಾ ಬಳಕೆ ಹಾಗೂ ಅರಣ್ಯ ಇಲಾಖೆಯ ಅತಿಥಿಗೃಹಗಳ ಶುಲ್ಕಗಳಲ್ಲಿಯೂ ಪರಿಷ್ಕರಣೆ ಮಾಡಲಾಗಿದೆ.

ಬಸ್‌ ಸಫಾರಿಗೆ ಒಬ್ಬರಿಗೆ ಒಂದು ಸಾವಿರ ರೂಪಾಯಿ, 12 ವರ್ಷದೊಳಗಿನ ಮಕ್ಕಳಿಗೆ ಐನೂರು ರೂಪಾಯಿ. ಇನ್ನು ಜೀಪ್‌ನಲ್ಲಿ ಸಫಾರಿ ಮಾಡುವುದಾದರೆ ವಯಸ್ಕರಿಗೆ ಒಂದೂವರೆ ಸಾವಿರ ರೂಪಾಯಿ, ಮಕ್ಕಳಿಗೆ 750 ರೂಪಾಯಿ ನೀಡಬೇಕಿದೆ. ಪ್ರೈವೇಟ್‌ ವಾಹನಗಳಲ್ಲಿ ಹೋಗುವವರಿಗೂ ದರ ಹೆಚ್ಚಳ ಮಾಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !