ಬೆಂಗಳೂರು ಏರ್ ಶೋ: ಕಾರ್ಯಕ್ರಮಗಳ ವಿವರ, ಆನ್​ಲೈನ್ ಪಾಸ್ ಬುಕಿಂಗ್ ಹೇಗೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬೆಂಗಳೂರಿನಲ್ಲಿ ಬಹು ನಿರೀಕ್ಷಿತ ಏರೋ ಇಂಡಿಯಾ 2025 ವೈಮಾನಿಕ ಪ್ರದರ್ಶನ ಸೋಮವಾರ ಆರಂಭವಾಗಿದೆ.

ರಕ್ಷಣಾ ಸಚಿವಾಲಯವು ಆಯೋಜಿಸಿರುವ ಈ ದ್ವೈವಾರ್ಷಿಕ ಕಾರ್ಯಕ್ರಮವು ಜಗತ್ತಿನಾದ್ಯಂತದ ವೈಮಾನಿಕ ಮತ್ತು ರಕ್ಷಣಾ ಕ್ಷೇತ್ರದ ಉದ್ಯಮಗಳು, ಉತ್ಸಾಹಿಗಳನ್ನು ಒಂದೆಡೆ ಸೇರುವಂತೆ ಮಾಡುತ್ತದೆ. ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುವ ಏರೋ ಇಂಡಿಯಾದಲ್ಲಿ ಏರ್ ಶೋ ಕೂಡ ಪ್ರಮುಖವಾದ ಆಕರ್ಷಣೆಯಾಗಿದೆ. ವಾಯುಪಡೆಯೂ ಸೇರಿದಂತೆ ಜಾಗತಿಕ ವಿಮಾನಯಾನ ಸಂಸ್ಥೆಗಳು, ರಕ್ಷಣಾ ಸಂಸ್ಥೆಗಳು ವೈಮಾನಿಕ ಪ್ರದರ್ಶನ ನಡೆಸುತ್ತವೆ.

ಏರೋ ಇಂಡಿಯಾ 2025 ಕಾರ್ಯಕ್ರಮ ಒಟ್ಟು ಐದು ದಿನ ನಡೆಯಲಿದ್ದು, ಮೊದಲ ಮೂರು ದಿನಗಳು (ಫೆಬ್ರವರಿ 10 ರಿಂದ 12) ಏರೋಸ್ಪೇಸ್ ಉದ್ಯಮಗಳು, ಉದ್ಯಮಿಗಳಿಗೆ ಮೀಸಲಾಗಿರುತ್ತವೆ. ಆದರೆ ಕೊನೆಯ ಎರಡು ದಿನಗಳು (ಫೆಬ್ರವರಿ 13 ಹಾಗೂ 14) ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆ.

ಏರೋ ಇಂಡಿಯಾ 2025 ಎಕ್ಸಿಬಿಷನ್ ಬೆಳಗ್ಗೆ 9:00 ರಿಂದ ಸಂಜೆ 6:00 ರವರೆಗೆ ತೆರೆದಿರುತ್ತದೆ. ಬಿಸಿನೆಸ್ ಪಾಸ್ ಬೆಲೆ ಭಾರತೀಯ ನಾಗರಿಕರಿಗೆ 5,000 ರೂ. ಹಾಗೂ ವಿದೇಶಿ ಪ್ರಜೆಗಳಿಗೆ 150 ಯುಎಸ್ ಡಾಲರ್ ಆಗಿದೆ. ಎಡಿವಿಎ ಪಾಸ್ (ಏರ್ ಡಿಸ್​​ಪ್ಲೇ ವ್ಯೂವಿಂಗ್ ಏರಿಯಾ ಪಾಸ್) ಬೆಲೆ ಭಾರತೀಯ ನಾಗರಿಕರಿಗೆ 1,000 ರೂ. ಮತ್ತು ವಿದೇಶಿ ಪ್ರಜೆಗಳಿಗೆ 50 ಯುಎಸ್ ಡಾಲರ್. ಸಾಮಾನ್ಯ ಸಂದರ್ಶಕರ ಪಾಸ್ ಬೆಲೆ ಭಾರತೀಯ ನಾಗರಿಕರಿಗೆ 2,500 ರೂ. ಹಾಗೂ ವಿದೇಶಿ ಪ್ರಜೆಗಳಿಗೆ 50 ಯುಎಸ್ ಡಾಲರ್ ಆಗಿದೆ.

ಏರೋ ಇಂಡಿಯಾದ ಅಧಿಕೃತ ವೆಬ್‌ಸೈಟ್‌ಗೆ (aeroindia.gov.in.) ಭೇಟಿ ನೀಡಿ. ‘ಟಿಕೆಟ್ಸ್’ ಸೆಕ್ಷನ್​​ಗೆ ಹೋಗಿ ಮತ್ತು ವಿಸಿಟರ್ಸ್ ರಿಜಿಸ್ಟ್ರೇಷನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನೀವು ಭಾರತೀಯ ಸಂದರ್ಶಕರೋ ಅಥವಾ ವಿದೇಶಿ ಸಂದರ್ಶಕರೋ ಎಂಬುದನ್ನು ಆಯ್ಕೆಮಾಡಿ. ಎಲ್ಲಾ ವಿವರಗಳನ್ನು ಭರ್ತಿ ಮಾಡಿ, ಅವುಗಳನ್ನು ಅನುಮೋದಿಸಿ ಮತ್ತು ಸೈನ್ ಅಪ್ ಮಾಡಿ. ನಂತರ ಮತ್ತೆ ಲಾಗಿನ್ ಮಾಡಿ ಮತ್ತು ಯಾವ ರೀತಿಯ ಪಾಸ್ ಬೇಕೆಂಬುದನ್ನು ಆರಿಸಿ (ಬಿಸಿನೆಸ್ ಪಾಸ್, ಜನರಲ್ ಪಬ್ಲಿಕ್ ಪಾಸ್, ಅಥವಾ ADVA (ಏರ್ ಡಿಸ್​​ಪ್ಲೇ ವ್ಯೂವಿಂಗ್ ಏರಿಯಾ ಪಾಸ್). ಅನುಮೋದನೆಯ ನಂತರ ಪಾಸ್ ಡೌನ್‌ಲೋಡ್ ಮಾಡಿ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!