ಬೆಂಗಳೂರು ಏರ್​ ಶೋ: ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗ, ಕಂಪ್ಲೀಟ್‌ ಡೀಟೇಲ್ಸ್‌ ಇಲ್ಲಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬೆಂಗಳೂರು ನಗರ ಯಲಹಂಕ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯ ಯಲಹಂಕ ವಾಯುಸೇನಾ ನೆಲೆಯಲ್ಲಿ ಫೆಬ್ರವರಿ 10 ರಿಂದ 14 ರ ರವರೆಗೆ ಪ್ರತಿಷ್ಠಿತ ಏರೋ ಇಂಡಿಯಾ 2025 ವೈಮಾನಿಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿರುತ್ತದೆ.

ಫೆಬ್ರವರಿ 10 ರಂದು ಬೆಳಿಗ್ಗೆ ಕಾರ್ಯಕ್ರಮದ ಉದ್ಭಾಟನಾ ಸಮಾರಂಭ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ರಾಷ್ಟೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಹಲವಾರು ಗಣ್ಯರು ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲಿದ್ದಾರೆ. ಇದರಿಂದಾಗಿ ಸಂಚಾರ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ.

ಒನ್‌ ವೇ ಸಂಚಾರ
ನಿಟ್ಟೆ ಮೀನಾಕ್ಷಿ ಕಾಲೇಜ್‌ ರಸ್ತೆ (ಪೂರ್ವದಿಕ್ಕಿನಿಂದ ಪಶ್ಚಿಮ ದಿಕ್ಕಿನ ಕಡೆಗೆ).

ಬಾಗಲೂರು ಮುಖ್ಯರಸ್ತೆ (ಪಶ್ಚಿಮದಿಂದ ಪೂರ್ವದಿಕ್ಕಿನ ಕಡೆಗೆ)

ಜಿಕೆವಿಕೆ ಕ್ಯಾಂಪಸ್​​ನಲ್ಲಿ ಉಚಿತ ಪಾರ್ಕಿಂಗ್‌:

ಜಿಕೆವಿಕೆ ಪಾರ್ಕಿಂಗ್‌ ಸ್ಥಳದಿಂದ ಅಡ್ವಾ ಪಾರ್ಕಿಂಗ್‌ ಹಾಗೂ ಡೊಮೆಸ್ಟಿಕ್‌ ಪಾರ್ಕಿಂಗ್‌ ಸ್ಥಳಕ್ಕೆ ತೆರಳಲು ಹಾಗೂ ವಾಪಸ್‌ ಜಿಕೆವಿಕೆ ಪಾರ್ಕಿಂಗ್‌ ಸ್ಥಳಕ್ಕೆ ಬರಲು ಬಿಎಂಟಿಸಿ ವತಿಯಿಂದ ಉಚಿತ ಎಸಿ ವಿಶೇಷ ಬಸ್‌ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಸಾರ್ವಜನಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಲು ಕೋರಿದೆ ಎಂದು ಟ್ರಾಫಿಕ್ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಬೆಂಗಳೂರು ಪೂರ್ವ ದಿಕ್ಕಿನಿಂದ ಅಡ್ವಾ (ಏರ್ ಡಿಸ್​ಪ್ಲೇ ಪ್ರದೇಶ) ಪಾರ್ಕಿಂಗ್‌ ಕಡೆ ಬರುವವರು ಕೆ.ಆರ್‌.ಪುರ – ನಾಗವಾರ ಜಂಕ್ಷನ್‌ – ಬಲತಿರುವು – ಥಣಿಸಂದ್ರ – ನಾರಾಯಣಪುರ ಕ್ರಾಸ್‌ – ಎಡ ತಿರುವು – ಟೆಲಿಕಾ೦ ಲೇಔಟ್‌ – ಜಕ್ಕೂರು ಕ್ರಾಸ್‌ – ಬಲ ತಿರುವು – ಯಲಹಂಕ ಬೈಪಾಸ್‌ – ಯಲಹಂಕ ಕಾಫಿ ಡೇ – ಪಾಲನಹಳ್ಳಿ ಗೇಟ್‌ ಸರ್ವಿಸ್‌ ರಸ್ತೆ (ಗ್ರೀಲ್‌ ಓಪನ್‌) ಫೋರ್ಡ್‌ ಷೋ ರೂಂ – ಎಡ ತಿರುವು – ನಿಟ್ಟೆ ಮೀನಾಕ್ಷಿ ಕಾಲೇಜ್‌ ರಸ್ತೆ ಯಿಂದ ಬರಬೇಕು ಎಂದು ಟ್ರಾಫಿಕ್ ಪೊಲೀಸ್ ಪ್ರಕಟಣೆ ತಿಳಿಸಿದೆ.
  • ಬೆಂಗಳೂರು ಪೂರ್ವ ದಿಕ್ಕಿನಿಂದ ಡೊಮೆಸ್ಟಿಕ್‌ ಪಾರ್ಕಿಂಗ್‌ ಕಡೆ ಬರುವವರು ಕೆ.ಆರ್‌. ಪುರ೦ – ಹೆಣ್ಣೂರು ಕ್ರಾಸ್‌ – ಕೊತ್ತನೂರು – ಗುಬ್ಬಿ ಕ್ರಾಸ್‌ – ಕಣ್ಣೂರು – ಬಾಗಲೂರು. – ಬಾಗಲೂರು ಲೇಔಟ್‌ – ರಜಾಕ್‌ ಪಾಳ್ಯ – ವಿದ್ಯಾನಗರ ಕ್ರಾಸ್‌ -ಹುಣಸಮಾರನಹಳ್ಳಿ ಮೂಲಕ ಬರಬಹುದಾಗಿದೆ.
  • ಬೆಂಗಳೂರು ಪಶ್ಚಿಮ ದಿಕ್ಕಿನಿಂದ ಏರ್ ಡಿಸ್​ಪ್ಲೇ ಪ್ರದೇಶ) ಪಾರ್ಕಿಂಗ್‌ ಕಡೆ ಬರುವವರು ಗೊರಗುಂಟಿಪಾಳ್ಯ – ಬಿ.ಇ.ಎಲ್‌ ವೃತ್ತ – ಗಂಗಮ್ಮ ವೃತ್ತ – ಎಂ.ಎಸ್‌ ಪಾಳ್ಯ ಸರ್ಕಲ್‌- ಉನ್ನಿಕೃಷ್ಣನ್‌ ರಸ್ತೆ – ಮದರ್‌ ಡೈರಿ ಜಂಕ್ಷನ್‌ – ಉನ್ನಿ ಕೃಷ್ಣನ್‌ ಜಂಕ್ಷನ್‌ – ಎಡ ತಿರುವು – ದೊಡ್ಡಬಳ್ಳಾಪುರ ರಸ್ತೆ ನಾಗೇನಹಳ್ಳಿ ಗೇಟ್‌ – ಬಲ ತಿರುವು – ಹಾರೋಹಳ್ಳಿ – ಗಂಟಗಾನಹಳ್ಳಿ ಸರ್ಕಲ್‌ ಬಲ ತಿರುವು ಪಡೆದು ಬರಬಹುದಾಗಿದೆ.
  • ಬೆಂಗಳೂರು ಪಶ್ಚಿಮ ದಿಕ್ಕಿನಿಂದ ಡೊಮೆಸ್ಟಿಕ್‌ ಪಾರ್ಕಿಂಗ್‌ ಕಡೆಗೆ ಬರುವವರು ಗೊರಗುಂಟೆಪಾಳ್ಯ ದ. ಬಿ.ಇ.ಎಲ್‌ ವೃತ್ತ – ಗಂಗಮ್ಮ ವೃತ್ತ – ಎಂ.ಎಸ್‌ ಪಾಳ್ಯ ಸರ್ಕಲ್‌- ಉನ್ನಿಕೃಷ್ಣನ್‌ ರಸ್ತೆ -ಮದರ್‌ ಡೈರಿ ಜಂಕ್ಷನ್‌ – ಉನ್ನಿಕೃಷ್ಣನ್‌ ಜಂಕ್ಷನ್‌ – ಎಡ ತಿರುವು – ದೊಡ್ಡಬಳ್ಳಾಪುರ ರಸ್ತೆ -ರಾಜಾನುಕುಂಟೆ – ಬಲ ತಿರುವು -ಅದ್ದಿಗಾನಹಳ್ಳಿ -ತಿಮ್ಮಸಂದ್ರ – ಎಂ.ವಿ.ಐ.ಟಿ ಕ್ರಾಸ್‌ – ವಿದ್ಯಾನಗರ ಕ್ರಾಸ್‌ — ಯು ತಿರುವು – ಹುಣಸಮಾರನಹಳ್ಳಿ ಮೂಲಕ ಬರಬೇಕು ಎಂದು ಪ್ರಕಟಣೆ ತಿಳಿಸಿದೆ.
  • 4 ಬೆಂಗಳೂರು ದಕ್ಷಿಣ ದಿಕ್ಕಿನಿಂದ ಏರ್ ಶೋ ಪಾರ್ಕಿಂಗ್‌ ಕಡೆಗೆ ಬರುವವರು ಮೈಸೂರು ರಸ್ತೆ-ನಾಯಂಡನಹಳ್ಳಿ-ಚಂದ್ರಾ ಲೇಔಟ್‌-ಗೊರಗುಂಟಿಪಾಳ್ಯ-ಬಿ.ಇ.ಎಲ್‌ ವೃತ್ತ- ಗಂಗಮ್ಮ ವೃತ್ತ -ಎಂ.ಎಸ್‌ ಪಾಳ್ಯ ಸರ್ಕಲ್‌-ಮದರ್‌ ಡೈರಿ ಜಂಕ್ಷನ್‌ -ಉನ್ನಿ ಕೃಷ್ಣನ್‌ ಜ೦ಕ್ಷನ್‌ – ದೊಡ್ಡಬಳ್ಳಾಪುರ ಮುಖ್ಯ ರಸ್ತೆ -ನಾಗೇನಹಳ್ಳಿ ಗೇಟ್‌ -ಬಲ ತಿರುವು -ಹಾರೋಹಳ್ಳಿ ಗ೦ಟಗಾನಹಳ್ಳಿ ಸರ್ಕಲ್‌ ಮೂಲಕ ಬರಬೇಕು ಎಂದು ತಿಳಿಸಲಾಗಿದೆ.
  • ಬೆಂಗಳೂರು ದಕ್ಷಿಣ ದಿಕ್ಕಿನಿಂದ ಡೊಮೆಸ್ಟಿಕ್‌ ಪಾರ್ಕಿಂಗ್‌ ಕಡೆಗೆ ಬರುವವರು ಮೈಸೂರು ರಸ್ತೆ-ನಾಯಂಡನಹಳ್ಳಿ -ಚಂದ್ರಾ ಲೇಔಟ್‌- ಗೊರಗುಂಟೆಪಾಳ್ಯ -ಬಿ.ಇ.ಎಲ್‌ ವೃತ್ತ – ಗಂಗಮ್ಮ ವೃತ್ತ -ಎಂ.ಎಸ್‌ ಪಾಳ್ಯ ಸರ್ಕಲ್‌- ಮದರ್‌ ಡೈರಿ-ಉನ್ನಿ ಕೃಷ್ಣನ್‌ ಜ೦ಕ್ಟನ್‌ – ಎಡ ತಿರುವು-ದೊಡ್ಡಬಳ್ಳಾಪುರ ರಸ್ತೆ ರಾಜಾನುಕುಂಟೆ- ಬಲ ತಿರುವು- ಅದ್ದಿಗಾನಹಳ್ಳಿ -ಎಂ.ವಿ.ಐ.ಟಿ ಕ್ರಾಸ್‌- ವಿದ್ಯಾನಗರ ಕ್ರಾಸ್‌-ಯು ತಿರುವು ಪಡೆದು – ಹುಣಸಮಾರನಹಳ್ಳಿ ಮೂಲಕ ಬರಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!