ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರಕ್ಕೆ ಕರೆ ಕೊಟ್ಟಿರುವ ಬೆಂಗಳೂರು ಬಂದ್‌ಗೆ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬೆಂಬಲ ನೀಡಿಲ್ಲ. ನಗರದ ಹಲವೆಡೆ ಈಗಾಗಲೇ ಬಿಎಂಟಿಸಿ ಬಸ್‌ಗಳು ರಸ್ತೆಗಿಳಿದಿದ್ದು, ನಗರದಿಂದ ಹೊರಹೋಗುವ ಕೆಎಸ್‌ಆರ್‌ಟಿಸಿ ಬಸ್‌ಗಳೂ ಎಂದಿನಂತೆ ಸಂಚರಿಸುತ್ತಿವೆ.
ಬೆಂಗಳೂರು ಹೃದಯ ಭಾಗ ಮೆಜೆಸ್ಟಿಕ್‌ನಲ್ಲಿ ಸಂಚಾರ ದಟ್ಟಣೆ ಯಥಾವತ್ತಾಗಿ ಇದೆ. ಕಚೇರಿ, ವಿವಿಧ ಕೆಲಸಗಳ ನಿಮಿತ್ತ ತೆರಳುವ ಪ್ರಯಾಣಿಕರು ಮೆಜೆಸ್ಟಿಕ್‌ನತ್ತ ಧಾವಿಸುತ್ತಿದ್ದಾರೆ. ಈಗಾಗಲೇ ಮೆಜೆಸ್ಟಿಕ್ ಸುತ್ತ ಮುತ್ತ ಅಂಗಡಿ-ಮುಂಗಟ್ಟುಗಳ ಸಹ ತೆರೆಯಲಾಗಿದ್ದು, ಓಲಾ, ಊಬರ್ ಟ್ಯಾಕ್ಸಿ-ಆಟೋ ಸೇವೆ ಈ ಭಾಗದಲ್ಲಿ ಲಭ್ಯವಾಗುತ್ತಿವೆ.