Wednesday, June 7, 2023

Latest Posts

ಮೂರನೇ ಚಾರ್ಲ್ಸ್‌ ಪಟ್ಟಾಭಿಷೇಕಕ್ಕೆ ಬೆಂಗಳೂರಿನ ವೈದ್ಯಗೆ ಆಹ್ವಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬ್ರಿಟನ್‌ ರಾಜಮನೆತನದ ದೊರೆಯಾಗಿ ಮೂರನೇ ಚಾರ್ಲ್ಸ್‌ ಅವರ ಪಟ್ಟಾಭಿಷೇಕ ಸಮಾರಂಭ ಮೇ 5 ಮತ್ತು 6ರಂದು ಲಂಡನ್‌ನ ವೆಸ್ಟ್‌ಮಿನಿಸ್ಟರ್‌ ಅಬೆಯಲ್ಲಿ ನಡೆಯಲಿದೆ.
ಕಾರ್ಯಕ್ರಮಕ್ಕೆ ಭಾರತ ಮತ್ತು ಜಗತ್ತಿನ ಪ್ರಮುಖ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 2,200 ಮಂದಿಗೆ ವಿಶೇಷ ಆಹ್ವಾನಿಸಲಾಗಿದೆ. ಈ ಪೈಕಿ ಬೆಂಗಳೂರಿನ ಸಮನೇತನಹಳ್ಳಿಯಲ್ಲಿ ಇರುವ ಡಾ. ಇಸಾಕ್‌ ಮಥಾಯಿ ಅವರಿಗೆ ಕೂಡ ಆಹ್ವಾನ ಲಭಿಸಿದ್ದು, ಈಗಾಗಲೇ ಪತ್ನಿ ಸುಜ ಜತೆಗೆ ಲಂಡನ್‌ಗೆ ತೆರಳಿದ್ದಾರೆ.

ಪ್ರಮುಖರು ಭಾಗಿ

ಉಪರಾಷ್ಟ್ರಪತಿ ಜಗದೀಪ್‌ ಧನ್ಕರ್‌ ಸೇರಿದಂತೆ ಜಗತ್ತಿನ 100 ರಾಷ್ಟ್ರಗಳ ಸರ್ಕಾರಿ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದಲ್ಲದೆ ಭಾರತೀಯ ಮೂಲದ ಸೌರಭ್‌ ಫ‌ಡ್ಕೆ, ಕೆನಡಾದಲ್ಲಿರುವ ಜೇ ಪಟೇಲ್‌ ಸೇರಿದಂತೆ ಹಲವು ಮಂದಿ ಸ್ವಯಂ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಭಾರತದ ಮೂಲದವರಿಗೆ ವಿಶೇಷ ಆಹ್ವಾನ ನೀಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!