ಶಿಲ್ಪ ಶಾಸ್ತ್ರದ ರಾಷ್ಟ್ರೀಯ ಸಮ್ಮೇಳನಕ್ಕೆ ಸಜ್ಜಾಗುತ್ತಿದೆ ಬೆಂಗಳೂರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ದಿ ಮಿಥಿಕ್ ಸೊಸೈಟಿಯ ನೇತೃತ್ವದಲ್ಲಿ ಶಿಲ್ಪ ಶಾಸ್ತ್ರದ ರಾಷ್ಟ್ರೀಯ ಸಮ್ಮೇಳನಕ್ಕೆ ರಾಜ್ಯ ರಾಜಧಾನಿ ಸಜ್ಜಾಗುತ್ತಿದೆ. ಬೆಂಗಳೂರು ಚಂದನ ಆರ್ಟ್ ಫೌಂಡೇಶನ್ ಇಂಟರ್ನ್ಯಾಷನಲ್, ಬೆಂಗಳೂರು ಸಂಸ್ಥೆಯ ಸಹಯೋಗದೊಂದಿಗೆ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಏರ್ಪಡಿಸಲಾಗಿದೆ. ’ಶಿಲ್ಪವಿದ್ಯಾ ಸಮುಚ್ಚಾಯ-ಪ್ರಾಚೀನ ಭಾರತೀಯ ಸಾಂಪ್ರದಾಯಿಕ ಶಿಲ್ಪಶಾಸ್ತ್ರ ಸಂಸ್ಕೃತಿ’ ವಿಷಯಕ್ಕೆ ಸಂಬಂಧಿಸಿದಂತೆ ಮಾರ್ಚ್‌ 11 ಮತ್ತು 12ರಂದು ಬೆಂಗಳೂರಿನ ದಿ ಮಿಥಿಕ್ ಸೊಸೈಟಿ ಸೆಂಟಿನರಿ ಹಾಲ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ.

ರಾಷ್ಟ್ರೀಯ ಸಮ್ಮೇಳನದ ಮುಖ್ಯ ಉದ್ದೇಶ ಪ್ರಾಚೀನ ಭಾರತೀಯ ಸಾಂಪ್ರದಾಯಿಕ ವಿವಿಧ ಶಿಲ್ಪಶಾಸ್ತ್ರ ಗ್ರಂಥಗಳು ಸೇರಿದಂತೆ.. (ಮಾನಸಾರ, ಕಾಶ್ಯಪಶಿಲ್ಪಶಾಸ್ತ್ರ, ಮಾಯಮತ, ಶಿಲ್ಪರತ್ನ, ಬ್ರಹ್ಮಿಯ ಚಿತ್ರಕರ್ಮಶಾಸ್ತ್ರ, ಸರಸ್ವತಿಯ ಚಿತ್ರಕರ್ಮಶಾಸ್ತ್ರ, ಶ್ರೀತತ್ವನಿಧಿ ಇತ್ಯಾದಿ)

ಪ್ರತಿಮೆ, ವಿಗ್ರಹ, ಶಿಲ್ಪದ ತಯಾರಿಕೆಯಲ್ಲಿ ಲಭ್ಯವಿರುವ ಸಾಹಿತ್ಯಕ, ಐತಿಹಾಸಿಕ ಮತ್ತು ಕಲಾತ್ಮಕ ಶಿಲ್ಪಕಲೆಯ ವೈಭವ, ದೇವತಾಮೂರ್ತಿಯ ಪ್ರಮುಖ ರೂಪಲಕ್ಷಣ, ಶೈಲಿ, ರಚನೆ, ಪ್ರತಿಮಾದಿ ಪ್ರತಿಷ್ಠಾನಕ್ಕೆ ಸಂಬಂಧಿಸಿದಂತೆ ವರ್ಗೀಕರಣ, ಧ್ಯಾನಶ್ಲೋಕ ಅಥವಾ ಧ್ಯಾನಸಂಗ್ರಹ – ಸಂಭಾವ್ಯ ಮೂಲಸ್ತೋತ್ರಗಳು, ತಾಲಮಾನ, ಶಿಲ್ಪರಚನೆ, ಭಾವಸ್ಪುರಣ, ಶಿಲ್ಪ ಆಂಗಿಕ ಸೌಂದರ್ಯ, ಅಂಗಭಂಗಿಗಳು, ಅಲಂಕಾರಿಕ ಆಭರಣಗಳು, ಕುಸುರಿ ಕೆಲಸದ ವೈಶಿಷ್ಟತೆ, ಶಿಲ್ಪಕಲೆಯ ಹಿಂದಿರುವ ವಿಜ್ಞಾನ, ಕಲೆ, ಶಿಸ್ತು, ಕರಕುಶಲತೆ, ಶ್ರದ್ಧೆ, ಶ್ರಮ, ಕಿರೀಟಗಳು, ಕೇಶ ವಿನ್ಯಾಸ. ಅಲಂಕಾರ, ಮುದ್ರಾವಿನ್ಯಾಸ, ಚಿಹ್ನೆಗಳು, ಸಂಕೇತಗಳು, ಪೀಠಗಳು, ವಾಹನಗಳು – ಪ್ರಾಣಿ ಮತ್ತು ಪಕ್ಷಿಗಳ ಪ್ರಾತಿನಿಧ್ಯಗಳು, ಆಯುಧಗಳು ಮುಂತಾವುದುಗಳ ಬಗ್ಗೆ ಯುವ ಶಿಲ್ಪಿಗಳಿಗೆ ಪರಿಚಯಿಸಿ ಮಾರ್ಗದರ್ಶನ ನೀಡಿ, ಸಂವಾದವನ್ನು ಪ್ರಸ್ತುತಪಡಿಸವ ಸದುದ್ದೇಶವನ್ನು ಹೊಂದಿದೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಯದುಗಿರಿ ಮಠದ 41ನೇ ಪೀಠಾಧಿಪತಿ ಶ್ರೀ ಶ್ರೀ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ಉಪಸ್ಥಿತರಿರುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!