ಬೆಂಗಳೂರನ್ನು ಮಣಿಸಿ ಮತ್ತೆ ಅಗ್ರಸ್ಥಾನಕ್ಕೇರಿದ ಮುಂಬೈ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮುಂಬೈ ಇಂಡಿಯನ್ಸ್​ ಆರ್​ಸಿಬಿ ವಿರುದ್ಧ 4 ವಿಕೆಟ್​ಗಳ ಜಯ ದಾಖಲಿಸಿ ಅಂಕ ಪಟ್ಟಿಯ ಅಗ್ರಸ್ಥಾನವನ್ನು ಗಳಿಸಿಕೊಂಡಿದೆ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿದ ಕೌರ್​ ಪಡೆ ಹರಸಾಹಸ ಪಟ್ಟು 21 ಬಾಲ್​ ಇರುವಂತೆಯೇ ಪಂದ್ಯವನ್ನು ಗೆದ್ದುಕೊಂಡಿತು.

ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಕೌರ್​ ಆರ್​ಸಿಬಿಯನ್ನು ಕಡಿಮೆ ರನ್​ಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಆರ್​ಸಿಬಿ 20 ಓವರ್​ಗೆ 9 ವಿಕೆಟ್​ ಕಳೆದುಕೊಂಡು 125 ರನ್​ ಗಳಿಸಿತು. ಇದನ್ನು ಬೆನ್ನು ಹತ್ತಿದ ಇಂಡಿಯನ್ಸ್​ನ್ನು ಬೆಂಗಳೂರು ಬೌಲರ್​ಗಳು ಕಾಡಿದರು. ಆರಂಭಿಕರಾದ ಹೇಲಿ ಮ್ಯಾಥ್ಯೂಸ್ ಮತ್ತು ಯಾಸ್ತಿಕಾ ಭಾಟಿಯಾ 53 ರನ್​​ನ ಜೊತೆಯಾಟ ಮಾಡಿದರು. 5ನೇ ಓವರ್​ ವೇಳೆಗೆ 50 ರನ್​ನ ಗಡಿ ಮುಟ್ಟಿದ್ದರು.
16ನೇ ಓವರ್​ನಲ್ಲಿ ಕನ್ನಿಕಾ ಅಹುಜಾ ಮುಂಬೈನ ಎರಡು ವಿಕೆಟ್​ ಪಡೆದು ಶಾಕ್​ ನೀಡಿದರಾದರೂ, ಅಮೆಲಿಯಾ ಕೆರ್ ಬೌಂಡರಿಯ ಮೂಲಕ ವಿಜಯದ ರನ್​ ದಾಖಲಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!