Thursday, March 30, 2023

Latest Posts

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ : ಟೋಲ್ ಶುಲ್ಕ ವಿರೋಧಿಸಿ ಪ್ರತಿಭಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಇಂದಿನಿಂದ ಟೋಲ್ ಸಂಗ್ರಹ ಆರಂಭವಾಗಿದ್ದು, ಇದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಟೋಲ್ ಶುಲ್ಕ ವಿಧಿಸಲೇಬೇಕು ಆದರೆ ಈಗ ವಿಧಿಸಿರುವ ಶುಲ್ಕ ದುಬಾರಿಯಾಗಿದೆ, ಪ್ರತಿದಿನ ಓಡಾಟ ನಡೆಸುವವರಿಗೆ ಅನಾನುಕೂಲವಾಗಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಸರ್ಕಾರ ಜನರಿಂದ ಹೆಚ್ಚಿನ ದರ ವಿಧಿಸಿ ಸುಲಿಗೆ ಮಾಡುತ್ತಿವೆ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ.

ಜತೆಗೆ ಟೋಲ್ ಸಂಗ್ರಹದ ವೇಳೆ ತಾಂತ್ರಿಕ ಸಮಸ್ಯೆಗಳೂ ಎದುರಾಗಿದ್ದು, ಗ್ರಾಹಕರು ಗರಂ ಆಗಿದ್ದಾರೆ. ಸರಿಯಾದ ಸಿದ್ಧತೆ ಮಾಡಿಲ್ಲ, ಟೆಕ್ನಿಕಲ್ ಸಮಸ್ಯೆ ಹೆಚ್ಚಾಗಿದೆ. ಸ್ಕ್ಯಾನ್ ಆಗೋದು ತಡವಾಗುತ್ತಿದೆ. ಸ್ಕ್ಯಾನ್ ನಂತರ ವಾಹನ ಮುಂದೆ ಬರುವಾಗ ಮತ್ತೆ ಕಂಬಿ ವಾಹನದ ಮೇಲೆ ಬೀಳುತ್ತಿದೆ, ಪೂರ್ವ ಸಿದ್ಧತೆ ಮಾಡದೆ ಟೋಲ್ ಸಂಗ್ರಹ ಆರಂಭ ಮಾಡಿದ್ಯಾಕೆ ಎಂದು ಚಾಲಕರು ಗರಂ ಆಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!