ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಟಿಎಂ ಬಳಕೆದಾರರಿಗೆ ವಂಚನೆ ಮಾಡುತ್ತಿದ್ದ ಮೂವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಎಟಿಎಂ ಬಳಕೆದಾರರನ್ನು ವಂಚಿಸಲು ಬೆಂಗಳೂರಿಗೆ ಬಂದಿದ್ದ ಶಿವಮೊಗ್ಗ ನಿವಾಸಿ ದಡಿಯಾ ದಿಲೀಪ್ ಎಂದು ಕರೆಯಲ್ಪಡುವ ಸಾಗರ್ ಅಲಿಯಾಸ್ ದಿಲೀಪ್ನನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ. ದಿಲೀಪ್ ಪ್ರಸ್ತುತ ನಗರದೊಳಗೆ ಕನಿಷ್ಠ ಮೂರು ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿದ್ದಾನೆ.
ಸಾಗರ್ ಎಟಿಎಂ ಕಿಯೋಸ್ಕ್‌ಗಳ ಹೊರಗೆ ಅಡ್ಡಾಡುತ್ತಿದ್ದ. ಹಣವನ್ನು ಹಿಂಪಡೆಯಲು ಹೆಣಗಾಡುತ್ತಿರುವ ಬಳಕೆದಾರರನ್ನು ಗಮನಿಸುತ್ತಿದ್ದ. ನಂತರ ಅವರಿಗೆ ಸಹಾಯ ಮಾಡುವ ನೆಪದಲ್ಲಿ ಅವರ ಎಟಿಎಂ ಕಾರ್ಡ್ ತೆಗೆದುಕೊಂಡು ಗೊತ್ತಾಗದಂತೆ ಅದರ ಬದಲು ಬೇರೆ ಕಾರ್ಡ್ ಸ್ವೈಪ್ ಮಾಡಿ ಅದು ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿ ಸಾಗಹಾಕುತ್ತಿದ್ದ. ಬಳಿಕ ಎಟಿಎಂ ಕಾರ್ಡ್ನಿಂದ ಹಣ ದೋಚುತ್ತಿದ್ದ ಎನ್ನಲಾಗಿದೆ.
ಬೇಗೂರು ಪೊಲೀಸರು ಎಟಿಎಂ ಕಿಯೋಸ್ಕ್‌ನ ಹೊರಗೆ ಕಾಯುತ್ತಿದ್ದಾಗ ಸಾಗರ್ನನ್ನು ಬಂಧಿಸಿದ್ದಾರೆ. ಆತ ತಪ್ಪೊಪ್ಪಿಕೊಂಡಿದ್ದಾನೆ ಮತ್ತು ಆತನ ಬಳಿಯಿಂದ ಸದ್ಯ ಸ್ಥಗತಗೊಂಡಿರುವ 32 ಎಟಿಎಂ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.