ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಬ್ರಿಟನ್ ರಾಜಕೀಯ ಆಶ್ರಯ ನೀಡಲು ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಆಕೆ ಲಂಡನ್ ಗೆ ತೆರಳುವುದಕ್ಕೆ ಅಡ್ಡಿ ಎದುರಾಗಿದ್ದು, ಇನ್ನೂ ಕೆಲವು ದಿನಗಳ ಕಾಲ ಭಾರತದಲ್ಲೇ ಉಳಿಯಲಿದ್ದಾರೆ.
ಪ್ರಧಾನಿಯಾಗಿ ರಾಜೀನಾಮೆ ನೀಡಿದ ಬಳಿಕ ಹಸೀನಾ, ಸಿ-130 ಜೆ ಮಿಲಿಟರಿ ಸಾಗಣೆ ವಿಮಾನದಲ್ಲಿ ಭಾರತದ ಹಿಂಡನ್ ವಾಯುನೆಲೆಗೆ ಬಂದಿಳಿದಿದ್ದರು. ಈಗ ಅವರನ್ನು ಭದ್ರತೆಯ ಕಾರಣದಿಂದ ಗೌಪ್ಯ ಸ್ಥಳದಲ್ಲಿ ಇರಿಸಲಾಗಿದೆ.
ಶೇಖ್ ಹಸೀನಾ ಜೊತೆಯಲ್ಲಿ ಆಕೆಯ ಸಹೋದರಿ ಶೇಖ್ ರೆಖಾನಾ ಇದ್ದು, ಭಾರತದಿಂದ ಲಂಡನ್ ಗೆ ತೆರಳುವವರಿದ್ದರು. ಬ್ರಿಟನ್ ಸರ್ಕಾರ ಶೇಖ್ ಹಸೀನಾಗೆ ರಾಜಕೀಯ ಆಶ್ರಯ ನೀಡುವುದಕ್ಕೆ ನಿರಾಕರಿಸಿರುವ ಹಿನ್ನೆಲೆಯಲ್ಲಿ ಶೇಖ್ ಹಸೀನಾ ಇನ್ನೂ ಕೆಲ ಕಾಲ ಭಾರತದಲ್ಲೇ ಉಳಿಯಲಿದ್ದಾರೆ. ಇದಕ್ಕೆ ಭಾರತ ಒಪ್ಪಿಗೆ ನೀಡಿದೆ.