ಮದುವೆಗಳನ್ನು ಆಯೋಜಿಸಿದ ಭಾರತೀಯ ನಗರಗಳ ಲಿಸ್ಟ್‌ನಲ್ಲಿ ಬೆಂಗಳೂರಿಗೆ 2ನೇ ಸ್ಥಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅತಿ ಹೆಚ್ಚು ವಿವಾಹಗಳನ್ನು ಆಯೋಜಿಸಿದ ಭಾರತೀಯ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಎರಡನೇ ಸ್ಥಾನ ಪಡೆದಿದೆ. ವೆಡ್ಡಿಂಗ್ ಟೆಕ್ನಾಲಜಿ ಪ್ಲಾಟ್‌ಫಾರ್ಮ್ ವೆಡ್ಡಿಂಗ್ ವೈರ್‌ನ 2022 ರ ವಾರ್ಷಿಕ ವರದಿ ಪ್ರಕಾರ ಅತಿ ಹೆಚ್ಚು ವಿವಾಹಗಳನ್ನು ಆಯೋಜಿಸಿದ ಭಾರತದ ಎರಡನೇ ನಗರ ಬೆಂಗಳೂರು ಎನ್ನಲಾಗಿದೆ.

ಡಿಸೆಂಬರ್‌ನಲ್ಲಿ ಶೇ.21.5ರಷ್ಟು ಪ್ರತಿಶತದಷ್ಟು ಮದುವೆಗಳು ನಡೆದಿವೆ. ಫೆಬ್ರವರಿಯಲ್ಲಿ 15.49ರಷ್ಟು ವಿವಾಹಗಳು ನಡೆದಿವೆ. ಹೆಚ್ಚು ಮದುವೆಗಳು ಭಾನುವಾರ ನಡೆದಿವೆ. ಅದರಲ್ಲಿಯೂ ಡಿಸೆಂಬರ್ 2 ರಂದು ಅತಿ ಹೆಚ್ಚು ವಿವಾಹಗಳು ನಡೆದಿವೆ.

ಬೆಂಗಳೂರಿನ ನಂತರದ ಸ್ಥಾನದಲ್ಲಿ ಉದಯಪುರ, ಗೋವಾ ಮತ್ತು ಜೈಪುರದಲ್ಲಿ ಅತಿ ಹೆಚ್ಚು ವಿವಾಹಗಳನ್ನು ಆಯೋಜಿಸಲಾಗಿದೆ. ಅಂತಾರಾಷ್ಟ್ರೀಯ ನಗರಗಳಲ್ಲಿ ಸಿಂಗಾಪುರ, ಅಬುಧಾಬಿ ಹಾಗೂ ನ್ಯೂಯಾರ್ಕ್‌ನಲ್ಲಿ ಭಾರತೀಯರು ಹೆಚ್ಚು ವಿವಾಹವಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!