ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಕಿನ ಹಬ್ಬವಾದ ದೀಪಾವಳಿಯನ್ನು ರಾಜ್ಯಾದ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ದೀಪಾವಳಿಯಂದು ಪಟಾಕಿ ಅಬ್ಬರವೂ ಜೋರಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪಟಾಕಿಯಿಂದ ಉಂಟಾಗುವ ವಾಯುಮಾಲಿನ್ಯ ಹೆಚ್ಚಾಗಿದೆ.
ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ವಾಯುಮಾಲಿನ್ಯ ಹೆಚ್ಚಿದ್ದು, ಜನರು ಉಸಿರಾಡಲು ಪರದಾಡುವಂತಾಗಿದೆ. ಕಳೆದ ವಾರ ಸುಮಾರು 50 ಡಿಗ್ರಿ ಇದ್ದ ತಾಪಮಾನ ಎರಡ್ಮೂರು ದಿನಗಳಲ್ಲಿ 100 ಡಿಗ್ರಿ ದಾಟಿದೆ. ವಾಯುಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ, ಗಾಳಿಯ ಗುಣಮಟ್ಟ 50 ಎಂದರೆ ಉತ್ತಮ ಗಾಳಿ, 50-60 ಎಂದರೆ ಮಧ್ಯಮ ಗಾಳಿ ಮತ್ತು 100-150 ಎಂದರೆ ಉಸಿರಾಡಲಾಗದ ಗಾಳಿ ಎಂದು ಹೇಳಲಾಗುತ್ತದೆ.
ಸದ್ಯ ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ 130 ಅಂಕಗಳಿಗಿಂತ ಹೆಚ್ಚಿದೆ.