ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದ ರಾಜಕೀಯ ಬಿಕ್ಕಟ್ಟು ಕೋಲಾರ ಜಿಲ್ಲೆಯ ಟೊಮೆಟೊ ಬೆಳೆಗಾರರಿಗೆ ಬಿಸಿ ತಟ್ಟಿದೆ.
ಬಾಂಗ್ಲಾ ಬಿಕ್ಕಟ್ಟಿನ ಮೊದಲು, ಕೋಲಾರ ಎಪಿಎಂಸಿಯಿಂದ 15 ಕೆಜಿ ಟೊಮೆಟೊ ಬಾಕ್ಸ್ 1,100 ರಿಂದ 1,200 ರೂಪಾಯಿವರೆಗೆ ಇತ್ತು. ಪ್ರಸ್ತುತ ಬೆಲೆ 350-480 ರೂ. 15 ದಿನಗಳ ಹಿಂದೆ ಕೆಜಿಗೆ 40 ರೂಪಾಯಿ ಇದ್ದ ಟೊಮೆಟೊ ಚಿಲ್ಲರೆ ದರ 12 ರೂಪಾಯಿಗೆ ಇಳಿದಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.
ಕೋಲಾರ ಜಿಲ್ಲೆಯಲ್ಲಿ ಬೆಳೆಯುವ ಟೊಮೆಟೊ ಪಶ್ಚಿಮ ಬಂಗಾಳದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತದೆ. ಅಲ್ಲಿಂದ ಬಾಂಗ್ಲಾದೇಶದ ವಿವಿಧ ಮಾರುಕಟ್ಟೆಗಳಿಗೆ ಕಳುಹಿಸಲಾಗುತ್ತದೆ. ಬಾಂಗ್ಲಾದೇಶದ ಗಂಭೀರ ಪರಿಸ್ಥಿತಿಯಿಂದಾಗಿ, ಟೊಮೆಟೊ ಮಾರಾಟ ಅರ್ಧದಷ್ಟು ಕಡಿಮೆಯಾಗಿದೆ.
ಈ ಹಿಂದೆ, ಪ್ರತಿದಿನ ಸುಮಾರು 50 ಟ್ರಕ್‌ಗಳಷ್ಟು ಉತ್ತಮ ಗುಣಮಟ್ಟದ ಟೊಮೆಟೊಗಳನ್ನು ಪಶ್ಚಿಮ ಬಂಗಾಳಕ್ಕೆ ಕಳುಹಿಸಲಾಗುತ್ತಿತ್ತು. ಈಗ 20 ಲೋಡ್ ಟೊಮೆಟೊ ಸಾಗಿಸುತ್ತಿದ್ದಾರೆ. ಇದರಿಂದ ಬೆಲೆ ಕುಸಿತದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.