ಭಾರತಕ್ಕೆ ತೆರಳದಂತೆ 50ಕ್ಕೂ ಹೆಚ್ಚು ಇಸ್ಕಾನ್‌ ಸದಸ್ಯರಿಗೆ ಬಾಂಗ್ಲಾ ಸರ್ಕಾರ ನಿಷೇಧ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶದಲ್ಲಿ ಇಸ್ಕಾನ್‌ (ISKCON) ಮೇಲಿನ ಸರ್ಕಾರದ ಪ್ರಹಾರ ಮುಂದುವರಿದಿದೆ. ಇತ್ತೀಚೆಗಷ್ಟೇ ಇಸ್ಕಾನ್‌ನ ಮೂವರು ಸನ್ಯಾಸಿಗಳನ್ನು ಬಂಧಿಸಿ, 17 ಮಂದಿಯ ಬ್ಯಾಂಕ್ ಖಾತೆಗಳನ್ನ (Bank Account) ಫ್ರೀಜ್‌ ಮಾಡಿತ್ತು. ಇದೀಗ ಇಸ್ಕಾನ್‌ನ 50ಕ್ಕೂ ಹೆಚ್ಚು ಸದಸ್ಯರು ಭಾರತಕ್ಕೆ ತೆರಳದಂತೆ ತಡೆಹಿಡಿದಿದೆ ಎಂದು ವರದಿಯಾಗಿದೆ.

54 ಸದಸ್ಯರನ್ನು ಭಾರತಕ್ಕೆ ಪ್ರವೇಶಿಸದಂತೆ ಬಾಂಗ್ಲಾದೇಶದ ಸರ್ಕಾರ ನಿರ್ಬಂಧಿಸಿ, ಅವರನ್ನು ಬೆನಾಪೋಲ್ ಗಡಿ ಚೆಕ್ಪಾಯಿಂಟ್ನಿಂದ ಹಿಂತಿರುಗಿಸಲಾಗಿದೆ. ಬಾಂಗ್ಲಾದೇಶದ ವಲಸೆ ಪೊಲೀಸರು ಸಂತರದ್ದು, “ಅನುಮಾನಾಸ್ಪದ ಪ್ರಯಾಣ” ಎಂದು ಉಲ್ಲೇಖಿಸಿ, ಮಾನ್ಯವಾದ ದಾಖಲೆಗಳನ್ನು ಹೊಂದಿದ್ದರೂ ಅವರನ್ನು ಹಿಂತಿರುಗಿಸಿದರು ಎನ್ನಲಾಗಿದೆ.

ನಾವು ಭಾರತದಲ್ಲಿ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಲು ಹೋಗುತ್ತಿದ್ದೆವು, ಆದರೆ ವಲಸೆ ಅಧಿಕಾರಿಗಳು ನಮ್ಮನ್ನು ಸರ್ಕಾರದ ಅನುಮತಿ ಇಲ್ಲದ ಕಾರಣ ನೀವು ತರಳಲು ಸಾಧ್ಯವಿಲ್ಲ ಎಂದು ತಡೆದಿದ್ದಾರೆ. ಎಂದು ಇಸ್ಕಾನ್ ಸದಸ್ಯರಲ್ಲಿ ಒಬ್ಬರಾದ ಸೌರಭ್ ತಪಂದರ್ ಚೆಲಿ ಸ್ಥಳೀಯ ಸುದ್ದಿವಾಹಿನಿಗಳಿಂದ ಉಲ್ಲೇಖಿಸಿದ್ದಾರೆ.

ಇನ್ನು ಬೆನಪೋಲ್ ಇಮಿಗ್ರೇಷನ್ ಚೆಕ್‌ಪೋಸ್ಟ್ ಅಧಿಕಾರಿ (OC) ಇಮ್ತಿಯಾಜ್ ಅಹ್ಸಾನುಲ್ ಕ್ವಾಡರ್ ಭುಯಾನ್ ಅವರು ಡೈಲಿ ಸ್ಟಾರ್‌ನೊಂದಿಗೆ ಮಾತನಾಡುವಾಗ “ಉನ್ನತ ಅಧಿಕಾರಿಗಳ” ಆದೇಶದ ನಂತರ ಇಸ್ಕಾನ್ ಸದಸ್ಯರನ್ನು ಹಿಂತಿರುಗಿಸಲಾಗಿದೆ ಎಂದು ಹೇಳಿದರು. ನಾವು ವಿಶೇಷ ಪೊಲೀಸ್ ಶಾಖೆಯನ್ನು ಸಂಪರ್ಕಿಸಿದ್ದೇವೆ ಮತ್ತು ಅವರಿಗೆ ಅನುಮತಿ ನೀಡದಂತೆ ಉನ್ನತ ಅಧಿಕಾರಿಗಳಿಂದ ಸೂಚನೆಗಳನ್ನು ಸ್ವೀಕರಿಸಿದ್ದೇವೆ ಎಂದು ಭುಯಾನ್ ಹೇಳಿದರು.

ಆದಾಗ್ಯೂ, ಮಾನ್ಯವಾದ ಪಾಸ್‌ಪೋರ್ಟ್‌ಗಳು ಮತ್ತು ವೀಸಾಗಳನ್ನು ಹೊಂದಿದ್ದರೂ ಸರ್ಕಾರಿ ಅಧಿಕಾರಿಗಳು ಬೆನಾಪೋಲ್-ಪೆಟ್ರಾಪೋಲ್ ಕ್ರಾಸಿಂಗ್ ಮೂಲಕ ತಮ್ಮ ಹಾದಿಯನ್ನು ಹಠಾತ್ತನೆ ಸ್ಥಗಿತಗೊಳಿಸಿದ್ದಕ್ಕೆ ಸ್ಪಷ್ಟ ಕಾರಣಗಳನ್ನು ನೀಡಲಾಗಿಲ್ಲ ಎಂದು ಇಸ್ಕಾನ್ ಸದಸ್ಯರ ಆರೋಪಿಸಿದರು.

ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ರಚನೆಯಾದ ನಂತರ ಬಾಂಗ್ಲಾದೇಶದ ಅಲ್ಪಸಂಖ್ಯಾತರು, ವಿಶೇಷವಾಗಿ ಹಿಂದುಗಳು ಇಸ್ಲಾಮಿಸ್ಟ್ ಗುಂಪುಗಳಿಂದ ತೀವ್ರ ದಾಳಿಗಳನ್ನು ಎದುರಿಸುತ್ತಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!