ಶ್ರೀಲಂಕಾ ಬಳಿಕ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ ಬಾಂಗ್ಲಾದೇಶ: ನೆರವಿಗಾಗಿ ಮೊರೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಇಂಧನ ದರಗಳಲ್ಲಿನ ಏರಿಳಿತಗಳ ಕಾರಣದಿಂದ ಬಾಂಗ್ಲಾದೇಶವು ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದು, ಪರಿಹಾರಕ್ಕಾಗಿ ನೆರವು ನೀಡುವಂತೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್​)ಗೆ ಮನವಿ ಮಾಡಿದೆ.

ಇತ್ತೀಚಿನ ವಾರಗಳಲ್ಲಿ ಬಾಂಗ್ಲಾದೇಶದಲ್ಲಿ ವಿದ್ಯುತ್ ಕೊರತೆ ಸಹ ಎದುರಾಗಿದ್ದು, ಕೆಲವೊಮ್ಮೆ 13 ತಾಸುಗಳವರೆಗೆ ವಿದ್ಯುತ್ ಕಡಿತವಾಗುತ್ತಿದೆ. ಇದರ ಜೊತೆಗೆ ಸಾಕಷ್ಟು ಡೀಸೆಲ್, ಗ್ಯಾಸ್ ಸಹ ಸಿಗದೆ ಜನ ಪರದಾಡುತ್ತಿದ್ದಾರೆ. ಏರ್​ ಕಂಡೀಶನರ್​ಗಳ ಬಳಕೆಯನ್ನು ನಿಲ್ಲಿಸುವಂತೆ ದೇಶದ ಹತ್ತಾರು ಸಾವಿರ ಮಸೀದಿಗಳಿಗೆ ಸರ್ಕಾರ ಸೂಚನೆ ನೀಡಿದೆ.

ಇತ್ತ ದೇಶದ ಕರೆನ್ಸಿ ಮೌಲ್ಯ ಸತತವಾಗಿ ಕುಸಿಯುತ್ತಿದ್ದು, ವಿದೇಶಿ ವಿನಿಮಯ ಸಂಗ್ರಹವೂ ದಿನದಿಂದ ದಿನಕ್ಕೆ ಇಳಿಕೆ ಕಾಣುತ್ತಿದೆ. ಈ ಮಧ್ಯೆ ದೇಶವನ್ನು ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡುವಂತೆ ಐಎಂಎಫ್​ಗೆ ಮನವಿ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉಕ್ರೇನ್ ಮೇಲಿನ ರಷ್ಯಾ ದಾಳಿಯ ನಂತರ ಅಂತಾರಾಷ್ಟ್ರೀಯ ಇಂಧನ ಬೆಲೆಗಳು ಏರುತ್ತಿರುವ ಕಾರಣ ಅಧಿಕಾರಿಗಳು ಆರ್ಥಿಕ ಬಿಕ್ಕಟ್ಟಿನ ಪರಿಹಾರಕ್ಕಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಕಿರಿಯ ಯೋಜನಾ ಸಚಿವ ಶಮ್ಸುಲ್ ಆಲಂ ತಿಳಿಸಿದರು.

ಳೆದ ಮೂರು ತಿಂಗಳಲ್ಲಿ ಬಾಂಗ್ಲಾದೇಶದ ಟಾಕಾ ಯುಎಸ್ ಡಾಲರ್ ವಿರುದ್ಧ ಶೇ 20ರಷ್ಟು ಕುಸಿದಿದೆ . ದೇಶದ ಕರೆನ್ಸಿ ಕುಸಿತದಿಂದ ರಾಷ್ಟ್ರದ ಆರ್ಥಿಕತೆಯು ಮತ್ತಷ್ಟು ದುರ್ಬಲಗೊಂಡಿದ್ದು, ಚಾಲ್ತಿ ಖಾತೆ ಕೊರತೆಯು 17 ಶತಕೋಟಿ ಡಾಲರ್ ಮುಟ್ಟಿದೆ.

ದೇಶಾದ್ಯಂತ 1,500 ಮೆಗಾವ್ಯಾಟ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರುವ ಡೀಸೆಲ್ ವಿದ್ಯುತ್ ಸ್ಥಾವರಗಳನ್ನು ಗ್ರಿಡ್‌ನಿಂದ ತೆಗೆದುಹಾಕಲಾಗಿದೆ. ಅಲ್ಲದೆ ಕೆಲ ಅನಿಲ ಆಧಾರಿತ ವಿದ್ಯುತ್ ಸ್ಥಾವರಗಳು ಸಹ ನಿಷ್ಕ್ರಿಯವಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!