ರಾಮಮಂದಿರಕ್ಕೆ ಶಿಲಾನ್ಯಾಸ ಮಾಡಿದ ದಿನದಂದು ಕಾಂಗ್ರೆಸ್‌ ಕಪ್ಪುಬಟ್ಟೆ ಧರಿಸಿ ಪ್ರತಿಭಟಿಸಿದ್ದೇಕೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ನೇತೃತ್ವದದಲ್ಲಿ ಶುಕ್ರವಾರ ದೆಹಲಿಯಲ್ಲಿ ನಡೆದ ಪ್ರತಿಭಟನೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಣದುಬ್ಬರವಾಗಲಿ, ನಿರುದ್ಯೋಗದ ವಿಚಾರಕ್ಕಾಗಲಿ ಕಾಂಗ್ರೆಸ್‌ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಿರಲಿಲ್ಲ. ಆ ಕಾರಣಕ್ಕಾಗಿ ನಡೆಸಿದ ಪ್ರತಿಭಟನೆ ಇದಲ್ಲ. ರಾಮಜನ್ಮಭೂಮಿಯ ಶಂಕುಸ್ಥಾಪನೆಯಾಗಿ ಎರಡು ವರ್ಷವಾದ ದಿನದ ಹಿನ್ನಲೆ ಇರಿಸಿಕೊಂಡು, ಬೇರೆ ಕಾರಣದೊಂದಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಿದ್ದಾರೆ.

ಅವರ ತುಷ್ಟೀಕರಣ ರಾಜಕೀಯವನ್ನ ಮತ್ತಷ್ಟು ಉತ್ತೇಜಿಸಲು ಪಕ್ಷವು ಈ ದಿನವನ್ನ ಆರಿಸಿಕೊಂಡಿದೆ. ಯಾಕಂದ್ರೆ, ಈ ದಿನವೇ ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಜನ್ಮಭೂಮಿಗೆ ಅಡಿಪಾಯ ಹಾಕಿದರು ಎಂದು ಹೇಳಿದರು.

ಇಡಿ ಯಾವುದೇ ಸಮನ್ಸ್‌ ನೀಡಿರಲಿಲ್ಲ. ಆದರೂ ಕಾಂಗ್ರೆಸ್‌ ಪ್ರತಿಭಟನೆ ಇರಿಸಿಕೊಂಡಿದ್ದ ಹಿಂದಿನ ಕಾರಣವೇನು. ಇಂದು ಇಡೀ ಕಾಂಗ್ರೆಸ್‌ ಪಕ್ಷದ ಪ್ರಮುಖ ನಾಯಕರು ಕಪ್ಪು ಪಟ್ಟಿ ಧರಿಸಿ ಬಂದಿದ್ದರು. ಯಾಕೆಂದರೆ, ನಿರುದ್ಯೋಗ ಅಥವಾ ಹಣದುಬ್ಬರದ ಕಾರಣಕ್ಕಾಗಿ ನಡೆದ ಪ್ರತಿಭಟನೆ ಇದಲ್ಲ. ಇಡಿ ಸಮನ್ಸ್‌ ಎನ್ನುವ ಹೆಸರಿನಲ್ಲಿ ರಾಮ ಜನ್ಮಭೂಮಿಗೆ ಶಂಕುಸ್ಥಾಪನೆ ಮಾಡಿ ಎರಡು ವರ್ಷವಾದ ದಿನವನ್ನು ಕರಾಳ ದಿನವನ್ನಾಗಿ ಆಚರಿಸುವ ಉದ್ದೇಶ ಇದರ ಹಿಂದಿದೆ. ಶಾಂತಿಯುತ ಪರಿಹಾರವಿತ್ತು, ಆದರೆ ಕಾಂಗ್ರೆಸ್ ಇನ್ನೂ ಸಂತೋಷವಾಗಿಲ್ಲ. ಈ ರಾಮಮಂದಿರದ ವಿರುದ್ಧ ಪ್ರತಿಭಟನೆ ಸಲುವಾಗಿ ಕಪ್ಪು ಬಟ್ಟೆಯನ್ನು ಬಳಸಲಾಗಿದೆ. ಇದು ಇನ್ನೂ ಯೋಜಿತ ಪ್ರತಿಭಟನೆಯಾಗಿದೆ ಎಂದು ಅವರು ಒತ್ತಿ ಹೇಳಿದರು.

ಇಡಿಗೆ ಸಂಬಂಧಿಸಿದಂತೆ ಕಾನೂನನ್ನು ಎಲ್ಲರೂ ಗೌರವಿಸಬೇಕು. ತುಷ್ಟೀಕರಣದ ನೀತಿಯು ಕಾಂಗ್ರೆಸ್ ಮತ್ತು ದೇಶಕ್ಕೆ ಒಳ್ಳೆಯದಲ್ಲ. ಇಡಿ ತನಿಖೆಗೆ ಕಾಂಗ್ರೆಸ್ ಸಹಕಾರ ನೀಡಬೇಕು. ದೂರಿನ ಆಧಾರದ ಮೇಲೆ ಪ್ರಕರಣ ನಡೆಯುತ್ತಿದೆ. ದೇಶದ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಎಲ್ಲರೂ ಗೌರವಿಸಬೇಕು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!