ಹೊಸದಿಗಂತ ಡಿಜಿಟಲ್ ಡೆಸ್ಕ್
ಇಂಡಿಯಾ- ಬಾಂಗ್ಲಾ ಏಕದಿನ ಪಂದ್ಯ ನಡೆಯುವ ದಿನವೇ ರಾಜಧಾನಿಯಲ್ಲಿ ಪ್ರತಿಪಕ್ಷಗಳು ಬೃಹತ್ ಪ್ರತಿಭಟನೆ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ಢಾಕಾದಲ್ಲಿ ನಡೆಯಬೇಕಿದ್ದ ಭಾರತದ ವಿರುದ್ಧದ ಪಂದ್ಯವನ್ನು ಬಾಂಗ್ಲಾದೇಶದ ಕ್ರಿಕೆಟ್ ಮಂಡಳಿಯು ಸ್ಥಳಾಂತರಿಸಿದೆ.
ಭಾರತವು 2015 ರ ಬಳಿಕ ಇದೇ ಮೊದಲ ಪ್ರವಾಸಕ್ಕಾಗಿ ಮುಂದಿನ ವಾರ ಬಾಂಗ್ಲಾದೇಶಕ್ಕೆ ತೆರಳುತ್ತಿದೆ. ಈ ಸರಣಿ ಡಿಸೆಂಬರ್ 4 ರಿಂದ ಪ್ರಾರಂಭವಾಗುವ ಏಕದಿನ ಅಂತರಾಷ್ಟ್ರೀಯ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ಎಲ್ಲಾ ಮೂರು ಪಂದ್ಯಗಳು ಢಾಕಾದಲ್ಲಿ ನಡೆಯಲಿವೆ.
ಡಿಸೆಂಬರ್ 10 ರಂದು ನಡೆಯಲಿರುವ ಸರಣಿಯ ಮೂರನೇ ಪಂದ್ಯವನ್ನು ಈಗ ಕರಾವಳಿ ನಗರವಾದ ಚಿತ್ತಗಾಂಗ್‌ಗೆ ಸ್ಥಳಾಂತರಿಸಲಾಗಿದೆ. ಅಂದು ದೇಶದಲ್ಲಿ ಪ್ರತಿಪಕ್ಷ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ರ್ಯಾಲಿ ಘೋಷಿಸಿದ್ದು ಸಾವಿರರು ಜನರು ಢಾಕಾದ ಬೀದಿಗಿಳಿಯುವ ನಿರೀಕ್ಷೆಯಿದೆ.
ಪ್ರಧಾನಿ ಶೇಖ್ ಹಸೀನಾ ಅವರ ಸರ್ಕಾರಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸುವ ಪ್ರಯತ್ನದಲ್ಲಿ ಬಿಎನ್‌ಪಿ ಕಳೆದ ತಿಂಗಳಿನಿಂದ ದೇಶಾದ್ಯಂತ ಹಲವಾರು ಬೃಹತ್ ಪ್ರತಿಭಟನೆಗಳನ್ನು ನಡೆಸುತ್ತಿದೆ. “ಚಿತ್ತಗಾಂಗ್ ಮೂಲತಃ ಒಂದು ಟೆಸ್ಟ್‌ಗೆ ಆತಿಥ್ಯ ವಹಿಸಬೇಕಿತ್ತು. ಅದೇ ಸ್ಥಳದಲ್ಲಿ ಏಕದಿನ ಪಂದ್ಯ ನಡೆಸಲು ತೀರ್ಮಾನಿಸಿದ್ದೇವೆ” ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಕಾರ್ಯಾಚರಣೆ ಮುಖ್ಯಸ್ಥ ಜಲಾಲ್ ಯೂನಸ್ ಹೇಳಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ