ಬಾಂಗ್ಲಾ ಪ್ರಧಾನಿ ವಿವಾದಾತ್ಮಕ ಹೇಳಿಕೆ: ಚೀನಿಯರಿಗೆ ನೀಡಿದ ಸಾರ್ವಜನಿಕ ಮನವಿ ಪ್ರಶ್ನಿಸಿದ ಸಂಜೀವ್ ಸನ್ಯಾಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶವನ್ನು ಮುನ್ನಡೆಸುತ್ತಿರುವ​ ಹಂಗಾಮಿ ಪ್ರಧಾನಿ ಮೊಹಮ್ಮದ್ ಯೂನಸ್ ಚೀನಾ ಭೇಟಿಯ ಸಂದರ್ಭದಲ್ಲಿ ಭಾರತದ ಈಶಾನ್ಯ ರಾಜ್ಯಗಳ ಕುರಿತು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು ತೀವ್ರ ಚರ್ಚೆಗೆ ಕಾರಣವಾಗಿದೆ.

ಭಾರತದ ಈಶಾನ್ಯದ ಏಳು ರಾಜ್ಯಗಳು ಸಂಪೂರ್ಣವಾಗಿ ನೆಲಾವೃತ್ತವಾಗಿದ್ದು, ಸಮುದ್ರಕ್ಕೆ ನೇರ ಮಾರ್ಗವಿಲ್ಲ. ಈ ಪ್ರದೇಶಕ್ಕೆ ಬಾಂಗ್ಲಾದೇಶವೇ ಸಮುದ್ರದ ಸಂರಕ್ಷಕನಾಗಿದ್ದು, ಚೀನಾಕ್ಕೆ ಈ ಪ್ರದೇಶವನ್ನು ತನ್ನ ವಿಸ್ತರಣೆಯ ಭಾಗವಾಗಿ ಪರಿಗಣಿಸ ಬೇಕೆಂದು ಸಲಹೆ ನೀಡಿದ್ದರು.

ಈ ಸಲಹೆಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ಆರ್ಥಿಕ ಸಲಹಾ ಮಂಡಳಿಯ ಸದಸ್ಯರಾದ ಸಂಜೀವ್ ಸನ್ಯಾಲ್, ಯೂನಸ್ ಭಾರತದ ಈಶಾನ್ಯ ಪ್ರದೇಶವನ್ನು ಏಕೆ ಉಲ್ಲೇಖಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ. “ಭಾರತದ ಏಳು ರಾಜ್ಯಗಳು ಭೂ-ಆವರಣಗೊಂಡಿವೆ ಎಂಬ ಆಧಾರದ ಮೇಲೆ ಯೂನಸ್ ಚೀನಿಯರಿಗೆ ಸಾರ್ವಜನಿಕ ಮನವಿ ಮಾಡುತ್ತಿರುವುದು ಕುತೂಹಲಕಾರಿಯಾಗಿದೆ. ಬಾಂಗ್ಲಾದೇಶದಲ್ಲಿ ಹೂಡಿಕೆ ಮಾಡಲು ಚೀನಾ ಸ್ವಾಗತಾರ್ಹವಾಗಿದೆ, ಆದರೆ ಏಳು ಭಾರತೀಯ ರಾಜ್ಯಗಳು ಭೂ-ಆವರಣಗೊಂಡಿವೆ ಎಂಬುದರ ಮಹತ್ವವೇನು?” ಎಂದು ಸಂಜೀವ್ ಕೇಳಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!