ಭಾರತಕ್ಕೆ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಭೇಟಿ: ಪ್ರಧಾನಿ ಮೋದಿ ಜೊತೆ ಹಲವು ಸರಣಿ ಒಪ್ಪಂದಗಳಿಗೆ ಸಹಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತದ ಮಿತ್ರರಾಷ್ಟ್ರ ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಅವರು ಎರಡು ದಿನ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ಜೊತೆ ದ್ವೀಪಕ್ಷೀಯ ಮಾತುಕತೆ ನಡೆಸಿದರು.

ಭಾರತ ಮತ್ತು ಬಾಂಗ್ಲಾದೇಶ ಹಲವಾರು ಹೊಸ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸಲು ಇಬ್ಬರು ನಾಯಕರು ಹಲವು ಸರಣಿ ಒಪ್ಪಂದಗಳಿಗೆ ಸಹಿ ಹಾಕಿದರು. ಡಿಜಿಟಲ್ ಡೊಮೇನ್‌ನಲ್ಲಿ ಸಂಬಂಧಗಳನ್ನು ವೃದ್ಧಿಸುವುದು, ಗ್ರೀನ್ ಪಾರ್ಟ್‌ನರ್‌ಶಿಪ್, ಎರಡು ದೇಶಗಳ ನಡುವೆ ರೈಲ್ವೆ ಸಂಪರ್ಕವನ್ನು ಹೆಚ್ಚಿಸುವುದು ಹಾಗೂ ಎರಡು ದೇಶಗಳ ಕಡಲ ಪ್ರದೇಶಗಳಲ್ಲಿ ನೀಲಿ ಆರ್ಥಿಕತೆಯನ್ನು ಬಲಪಡಿಸುವುದು ಸೇರಿದಂತೆ ಹಲವು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ವ್ಯಾಪಾರ, ಸಂಪರ್ಕ ಹಾಗೂ ಇಂಧನ ವಲಯದಲ್ಲಿ ಪ್ರಧಾನಿ ಮೋದಿ ಹಾಗೂ ಶೇಕ್ ಹಸೀನಾ ಅವರು ಪ್ರಮುಖವಾಗಿ ಮಾತುಕತೆ ನಡೆಸಿದ್ದು, ಇವರ ಮಾತುಕತೆಗಳು ಈ ಕ್ಷೇತ್ರಕ್ಕೆ ಹೊಸ ಶಕ್ತಿ ನೀಡಲಿದೆ ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಭೇಟಿ ವೇಳೆ ಭಾರತ ಹಾಗೂ ಬಾಂಗ್ಲಾದೇಶದ ಐತಿಹಾಸಿಕ ಸಂಬಂಧಗಳ ಬಗ್ಗೆ ಶೇಕ್ ಹಸೀನಾ ಅಭಿಪ್ರಾಯ ವ್ಯಕ್ತಪಡಿಸಿದರು. ಭಾರತವೂ ಬಾಂಗ್ಲಾದೇಶದ ಪ್ರಮುಖ ನೆರೆಯ ವಿಶ್ವಾಸಾರ್ಹ ಸ್ನೇಹಿತ ದೇಶವಾಗಿದ್ದು, ಬಾಂಗ್ಲಾದೇಶ ವಿಮೋಚನೆಯ ಸಮಯದಲ್ಲಿ ಭಾರತ ನೀಡಿದ ನೆರವನ್ನು ಉಲ್ಲೇಖಿಸಿ ಎರಡು ದೇಶಗಳ ನಡುವೆ ಬೇರೂರಿರುವ ಆಳವಾದ ಸಂಬಂಧವನ್ನು ಒತ್ತಿ ಹೇಳಿದರು.

ಶೇಕ್ ಹಸೀನಾ ಅವರು ಜೂನ್ 9 ರಂದು ನಡೆದ ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣವಚನ ಸಮಾರಂಭಕ್ಕೂ ಆಗಮಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!