Tuesday, November 18, 2025

ಬಾಂಗ್ಲಾದೇಶ ಮಹಿಳಾ ತಂಡದ ಭಾರತ ಪ್ರವಾಸ ಮುಂದೂಡಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಡಿಸೆಂಬರ್‌ನಲ್ಲಿ ನಡೆಯಬೇಕಿದ್ದ ಬಾಂಗ್ಲಾದೇಶ ಭಾರತ ಮಹಿಳಾ ತಂಡದ ಸೀಮಿತ ಓವರ್‌ಗಳ ಮ್ಯಾಚ್ ಮುಂದೂಡಲಾಗಿದೆ.

ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿಯ ಪ್ರಕಾರ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ), ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ (ಬಿಸಿಸಿಐ) ಸರಣಿ ಮುಂದೂಡಿಕೆಯ ಪತ್ರವನ್ನು ಸ್ವೀಕರಿಸಿದೆ ಎನ್ನಲಾಗಿದೆ.

ಭಾರತ ತಂಡವು ಬಾಂಗ್ಲಾದೇಶ ವಿರುದ್ಧ ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳಲ್ಲಿ ಸೆಣಸಬೇಕಿತ್ತು. ಈ ಏಕದಿನ ಸರಣಿಯು ಎರಡೂ ತಂಡಗಳಿಗೆ ಐಸಿಸಿ ಮಹಿಳಾ ಏಕದಿನ ಚಾಂಪಿಯನ್‌ಶಿಪ್‌ನ ಆರಂಭಿಕ ಪಂದ್ಯವಾಗಿತ್ತು.

ಇದೀಗ ಎರಡೂ ದೇಶಗಳ ನಡುವೆ ನಡೆಯುತ್ತಿರುವ ರಾಜಕೀಯ ಉದ್ವಿಗ್ನತೆಗಳು ಸರಣಿ ನಿಗದಿಯಂತೆ ಮುಂದುವರಿಯದಿರಲು ಪ್ರಮುಖ ಅಂಶವಾಗಿರಬಹುದು ಎಂದು ತಿಳಿದುಬಂದಿದೆ. ಪಂದ್ಯಗಳು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮತ್ತು ಕಟಕ್‌ನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು.

ಭಾರತ ಮತ್ತು ಬಾಂಗ್ಲಾದೇಶ ಸರಣಿ ಮುಂದೂಡಲ್ಪಟ್ಟಿದ್ದು ಇದೇ ಮೊದಲಲ್ಲ. ಆಗಸ್ಟ್ ಆರಂಭದಲ್ಲಿ, ಭಾರತದ ಪುರುಷರ ತಂಡದ ಏಕದಿನ ಸರಣಿಯ ಬಾಂಗ್ಲಾದೇಶ ಪ್ರವಾಸವನ್ನು ಮುಂದೂಡಲಾಗಿತ್ತು.

error: Content is protected !!