ಬಾಂಗ್ಲಾ ಅಕ್ರಮ ನುಸುಳುಕೋರರು ಪೊಲೀಸ್ ಬಲೆಗೆ : ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

ಹೊಸದಿಗಂತ ವರದಿ ಚಿತ್ರದುರ್ಗ: 

ನಗರದ ಹೊಳಲ್ಕೆರೆ ರಸ್ತೆಯ ದವಳಗಿರಿ ಎರಡನೇ ಹಂತದಲ್ಲರುವ  ಅರವಿಂದ ಗಾರ್ಮೆಂಟ್ಸ್ ಬಳಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ವ್ಯಕ್ಯಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಕ್ರಮ ನುಸುಳುಕೋರರನ್ನು ಪತ್ತೆ ಮಾಡಿರುವ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಬಂಧಿತರು ಶೇಕ್ ಸೈಪುಲ್ಲಾ ರೆಹಮಾನ್, ಮೊಹಮದ್ ಸುಮನ್ ಹುಸೇನ್, ಮಜ್ಹಾರುಲ್, ಸನೋವರ್ ಹುಸೇನ್, ಮಹಮದ್ ಸಕಿಬ್ ಸಿಕ್ದರ್, ಅಜೀಜುಲ್ ಶೇಕ್ ಎಂದು ತಿಳಿದುಬಂದಿದೆ. ಇವರನ್ನು ವಿಚಾರಣೆಗೊಳಪಡಿಸಿ ಅವರುಗಳ ಬಳಿ ಇದ್ದ ಕಾಗದಪತ್ರಗಳನ್ನು ಪರೀಶೀಲಿಸಲಾಗಿದೆ. ಇವರು ಬಾಂಗ್ಲಾದೇಶಕ್ಕೆ ಸೇರಿದ ಪ್ರಜೆಗಳಾಗಿದ್ದು, ಭಾರತಕ್ಕೆ ಬಂದು ಇಲ್ಲಿಯೇ ನೆಲೆಸುವ
ಉದ್ದೇಶ ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ಈಗಾಗಲೇ ಸುಮಾರು ವರ್ಷಗಳ ಹಿಂದೆಯೇ ಅಕ್ರಮವಾಗಿ ಭಾರತಕ್ಕೆ ನುಸುಳಿ, ಪಶ್ಚಿಮ ಬಂಗಾಳ ರಾಜ್ಯಕ್ಕೆ ಬಂದು, ಕೋಲ್ಕತ್ತ ನಗರದಲ್ಲಿ ನಕಲಿ ಆಧಾರ್ ಕಾರ್ಡ್, ಇತರೆ ದಾಖಲೆಗಳನ್ನು ಮಾಡಿಸಿಕೊಂಡು ಭಾರತದ ವಿವಿಧ ರಾಜ್ಯಗಳಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎಂದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ. ಈಗ ಹಾಲಿ ಚಿತ್ರದುರ್ಗ ನಗರಕ್ಕೆ ಕೆಲಸ ಹುಡುಕಿಕೊಂಡು ಬಂದಿದ್ದಾರೆ. ಇವರಲ್ಲಿದ್ದ
ನಕಲಿ ಆಧಾರ್ ಕಾರ್ಡಗಳು, ಮತದಾರರ ಗುರುತಿನ ಚೀಟಿಗಳು, ಲೇಬರ್ ಕಾರ್ಡಗಳು, ಬ್ಯಾಂಕ್ ಪಾಸ್ ಬುಕ್‌ಗಳು,  ಪಾನ್ ಕಾರ್ಡಗಳು ಹಾಗೂ ಒಂದು ಪಾಸ್‌ಪೋರ್ಟನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಜಿಲ್ಲೆಯಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಬಾಂಗ್ಲಾ ದೇಶದ ಪ್ರಜೆಗಳನ್ನು ಪತ್ತೆ ಮಾಡಿದ ಸಿ.ಇ.ಎನ್. ಪೊಲೀಸ್ ಠಾಣೆ ಪೊಲೀಸ್ ಇನ್ ಸ್ಪೆಕ್ಟರ್ ಎನ್.ವೆಂಕಟೇಶ್, ಜಿಲ್ಲಾ ವಿಶೇಷ ವಿಭಾಗದ ಪೊಲೀಸ್ ಇನ್ ಸ್ಪೆಕ್ಟರ್ ಎನ್.ಗುಡ್ಡಪ್ಪ, ಚಿತ್ರದುರ್ಗ ಕೋಟೆ ಠಾಣೆ ಪೊಲೀಸ್  ಇನ್ ಸ್ಪೆಕ್ಟರ್ ದೊಡ್ಡಣ್ಣ,  ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸ್ ಇನ್ ಸ್ಪೆಕ್ಟರ್ ಮುದ್ದುರಾಜ್ ಹಾಗೂ ಸಿಬ್ಬಂದಿಯವರಾದ ಎಎಸ್‌ಐ ಆರ್.ಈ.ತಿಪ್ಪೇಸ್ವಾಮಿ, ಸಿಹೆಚ್‌ಸಿಗಳಾದ ಆರ್.ಮಧು, ಎನ್.ಕೆಂಚಪ್ಪ, ಸಿದ್ದಲಿಂಗಯ್ಯ ಹಿರೇಮಠ್ ಇವರ ಕಾರ್ಯವನ್ನು
ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!