ಮಹಿಳಾ ಕ್ರಿಕೆಟ್‌ನಿಂದ ಮಂಗಳಮುಖಿಯರಿಗೆ ನಿಷೇಧ: ಐಸಿಸಿಯಿಂದ ಮಹತ್ವದ ನಿಯಮ ಜಾರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿಶ್ವಕಪ್ ಟೂರ್ನಿ ಮುಗಿದ ಬೆನ್ನಲ್ಲೇ ಐಸಿಸಿ ಮಹತ್ವದ ನಿಯಮ ಜಾರಿಗೊಳಿಸಿದೆ. ಐಸಿಸಿ ಮಹಿಳಾ ಕ್ರಿಕೆಟ್‌ನಿಂದ ಮಂಗಳಮುಖಿಯರಿಗೆ ನಿಷೇಧ ಹೇರಿದೆ.

ಎಲ್ಲಾ ಮಂಗಳಮುಖಿಯರನ್ನು ಮಹಿಳಾ ಕ್ರಿಕೆಟ್‌ನಿಂದ ನಿಷೇಧಿಸಲಾಗಿದೆ. ನ್ಯಾಯಸಮ್ಮತೆ ಕ್ರಿಕೆಟ್ ಟೂರ್ನಿಗಾಗಿ ಈ ನಿರ್ಧಾರ ಮಾಡಲಾಗಿದೆ ಎಂದು ಐಸಿಸಿ ಹೇಳಿದೆ.

ಯಾವುದೇ ಪ್ಲೇಯರ್ ಪುರುಷನಿಂದ ಮಹಿಳೆಯಾಗಿ ಬದಲಾಗಿದ್ದರೆ ಅಥವಾ ಯಾವುದೇ ರೀತಿಯ ಸರ್ಜರಿ ಮಾಡಿ ಸಂಪೂರ್ಣವಾಗಿ ಮಹಿಳೆಯಾಗಿ ಬದಲಾಗಿದ್ದರೂ ಮಹಿಳಾ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ. ಕಳೆದ 9 ತಿಂಗಳಿನಿಂದ ಕ್ರಿಕೆಟ್ ತಜ್ಞರು, ಮಾಜಿ ಕ್ರಿಕೆಟಿಗರು, ಅಂತಾರಾಷ್ಟ್ರೀಯ ಕಾನೂನು ಸಲಹೆಗಾರರು ಸೇರಿದಂತೆ ಹಲವರು ಬಳಿ ಚರ್ಚಿಸಿ ಹೊಸ ಐಸಿಸಿ ನೀತಿಯನ್ನು ಜಾರಿಗೊಳಿಸಲಾಗಿದೆ ಎಂದು ಐಸಿಸಿ ಹೇಳಿದೆ.

ಮಹಿಳಾ ಕ್ರಿಕೆಟ್‌ನ ಸುರಕ್ಷತೆ, ನ್ಯಾಯಸಮ್ಮತೆ, ಸಮಗ್ರತೆ ರಕ್ಷಣೆ ದೃಷ್ಟಿಯಿಂದ ಈ ನಿರ್ಧಾರ ಪ್ರಕಟಿಸಲಾಗಿದೆ. ಹೊಸ ನಿಯಮದ ಪ್ರಕಾರ 2 ವರ್ಷದಲ್ಲಿ ಮಹಿಳೆಯರ ಲಿಂಗ ಅರ್ಹತೆಯನ್ನು ಪರೀಕ್ಷಿಸಲಾಗುತ್ತದೆ. ಪುರಷರಾಗಿ ಬಳಿಕ ಮಹಿಳೆಯಾಗಿ ಬದಲಾಗುವುದರಿಂದ ಅವರಲ್ಲಿ ಪುರಷರ ಶಕ್ತಿ ಇರಲಿದೆ. ಇದರಿಂದ ಬೌಲಿಂಗ್ ವೇಗ, ಶಕ್ತಿ ಸಾಮರ್ಥ್ಯ ಹೆಚ್ಚಿರುತ್ತದೆ. ಮಂಗಳಮುಖಿಯರು ಮಹಿಳಾ ಕ್ರಿಕೆಟ್‌ನಲ್ಲಿ ಆಡುವುದರಿಂದ ಮಹಿಳಾ ಕ್ರಿಕೆಟ್ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ಐಸಿಸಿ ಹೇಳಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಕೆನಡಾದ ಮಂಗಳಮುಖಿ ಪ್ಲೇಯರ್ ಡೇನಿಯಲ್ ಮೆಕ್‌ಗೆಹೆ ಬ್ರೆಜಿಲ್ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದ್ದರು. ಆದರೆ ಇದು ವಿವಾದಕ್ಕೆ ಕಾರಣವಾಗಿತ್ತು. ಇಷ್ಟೇ ಆಡುವ ಅವಕಾಶವೂ ಸಿಗಲಿಲ್ಲ. ಇದರ ಬೆನ್ನಲ್ಲೇ ಐಸಿಸಿ ನಿಯಮ ಪರಿಷ್ಕರಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!