ಹೊಸದಿಗಂತ ವರದಿ ಬಂಟ್ವಾಳ:
ರಸ್ತೆ ಬದಿಯಲ್ಲಿ ದನದ ತ್ಯಾಜ್ಯ ಎಸೆದು ಸಮಾಜದಲ್ಲಿ ಅಶಾಂತಿ ಮಾಡಲು ಹೊರಟಿರುವ ದುಷ್ಕರ್ಮಿಗಳ ಕೃತ್ಯವನ್ನು ವಿಶ್ವಹಿಂದೂ ಪರಿಷತ್ ಭಜರಂಗದಳದ ಕಲ್ಲಡ್ಕ ಪ್ರಖಂಡದ ಅಧ್ಯಕ್ಷ ಸಚಿನ್ ಮೆಲ್ಕಾರ್ ಹಾಗೂ ವಿಟ್ಲ ಪ್ರಖಂಡದ ಭಜರಂಗದಳ ಸಂಚಾಲಕ ಚೇತನ್ ಕಡಂಬು ಅವರು ತೀವ್ರವಾಗಿ ಖಂಡಿಸಿ, ಕೃತ್ಯ ಎಸೆಗಿದ ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ.
ಕೆಲಿಂಜ ಕೊಟ್ಟಾರಿ ಕಟ್ಟೆ ಬಸ್ ನಿಲ್ದಾಣದ ಬಳಿ ಹೆದ್ದಾರಿ ಬದಿಯಲ್ಲಿ ದನದ ತ್ಯಾಜ್ಯ ಎಸೆದು ಹೋಗಿರುವುದು ಖಂಡನೀಯ. ನವರಾತ್ರಿ ಸಂದರ್ಭದಲ್ಲಿ ಉದ್ದೇಶ ಪೂರ್ವಕವಾಗಿ ದುಷ್ಕರ್ಮಿಗಳು ದನದ ಕೈ ,ಕಾಲು,ಚರ್ಮ, ಹಲ್ಲು ಸಹಿತ ಇತರ ವಸ್ತುಗಳನ್ನು ಬಿಸಾಡಿದ್ದಾರೆ. ದನಗಳನ್ನು ಕದ್ದು ಅಕ್ರಮವಾಗಿ ಮಾಂಸ ಮಾಡುವ ದಂದೆ ನಿರಂತರವಾಗಿ ನಡೆಯುತ್ತಿದೆ.
ಇದೀಗ ಮತ್ತೆ ಹಿಂದೂಗಳ ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ದನಗಳನ್ನು ಕಡಿದು ಅದರ ವಿವಿಧ ಭಾಗಗಳನ್ನು ಇಲ್ಲಿ ಎಸೆದು ಹೋಗಿದ್ದಾರೆ. ಇದರಿಂದ ಅಶಾಂತಿ ತಲೆದೋರಬೇಕು ಎಂಬುದು ಅವರ ಉದ್ದೇಶವಾಗಿದೆ ಎಂದು ಆರೋಪ ಮಾಡಿದ್ದಾರೆ. ಶೀಘ್ರವಾಗಿ ದನದ ತ್ಯಾಜ್ಯ ಎಸೆದ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಿ ಎಂದು ಅವರು ತಿಳಿಸಿದ್ದಾರೆ.