Thursday, February 9, 2023

Latest Posts

ತಲೆ ಮೇಲೆ ಕಲ್ಲು ಹಾಕಿ ವ್ಯಕ್ತಿಯೊಬ್ಬನ ಬರ್ಬರ ಹತ್ಯೆ

ದಿಗಂತ ವರದಿ ವಿಜಯಪುರ:

ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಇಲ್ಲಿನ ಅಲಕುಂಟೆ ‌ನಗರದಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಮೃತಪಟ್ಟವನನ್ನು ಮಲ್ಲಿಕಾರ್ಜುನ ದೊಡಮನಿ (43) ಎಂದು ಗುರುತಿಸಲಾಗಿದೆ.

ಮಲ್ಲಿಕಾರ್ಜುನ ದೊಡಮನಿ ಈತನನ್ನು ಯಾರೋ ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಹತ್ಯೆಯಾಗಿರುವ ಮಲ್ಲಿಕಾರ್ಜುನ ಈ ಹಿಂದೆ ವಿಜಯಪುರ ಸಂಸದ ರಮೇಶ ಜಿಗಜಿಣಗಿ ವಾಹನ ಚಾಲಕನಾಗಿ ಕೆಲಸ ಮಾಡಿದ್ದನು. ಕಳೆದ ಮೂರು ವರ್ಷದ ಹಿಂದೆ ಜಿಗಜಿಣಗಿ ಬಳಿ ಕೆಲಸ ಬಿಟ್ಟಿದ್ದನು. ಅಲ್ಲದೇ,
ಹಣಕಾಸಿನ‌ ವ್ಯವಹಾರವೇ ಮಲ್ಲಿಕಾರ್ಜುನ ಕೊಲೆಗೆ ಕಾರಣ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಆದರ್ಶ ನಗರ ಪೊಲೀಸ್ ಠಾಣಾ‌ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!