ಹೊಸದಿಗಂತ ಕಾರವಾರ :
ಹಗಲು ಮನೆಗಳ್ಳತನ ಮತ್ತು ರಾಜ್ಯ ಹಾಗೂ ಅಂತಾರಾಜ್ಯಗಳ 128 ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಕಳವು ಆರೋಪಿಯನ್ನು ಕಾರವಾರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನ.7 ರಂದು ಕಾರವಾರ ನಗರದ ಅಭಿಮಾನಶ್ರೀ ಅಪಾರ್ಟಮೆಂಟಿನ ಫ್ಲ್ಯಾಟ್‌ನಲ್ಲಿ ಹಗಲು ಕಳ್ಳತನವಾದ ಬಗ್ಗೆ ಮಾಲೀಕ ಪ್ರಿಯಾ ಅಂತೋನಿ ಫರ್ನಾಂಡೀಸ್ ನೀಡಿದ್ದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು 3 ತಂಡಗಳನ್ನು ರಚಿಸಿ ತನಿಖೆ ನಡೆಸಲಾಗಿತ್ತು.
ಒಂದು ತಂಡದ ನೇತೃತ್ವ ವಹಿಸಿದ್ದ ಕಾರವಾರ ಶಹರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಮೇಶ.ಶಂ.ಹೂಗಾರ, ಉಪನಿರೀಕ್ಷಕ ರವೀಂದ್ರ ಬಿರಾದರ ಹಾಗೂ ಸಿಬ್ಬಂದಿಗಳಾದ ಸುರಜ ಕೊಠಾರಕರ, ಹಸನ ಕುಟ್ಟಿ. ಗಿರೀಶಯ್ಯ ಎಂ.ಎಸ್ ತಂಡವು ಪಂಜಾಬದ ಜಲಂಧರ ಜಿಲ್ಲೆಯ ರಾಮಮಂಡಿ ಗ್ರಾಮದ ಸಮೀರ್ ಶರ್ಮಾ(40) ಎಂಬಾತನನ್ನು ಬಂಧಿಸಿ ತಂದಿದ್ದಾರೆ.
ಈತ ಪ್ರತಿ ಬಾರಿ ಗುಲ್ಲು ,ಸ್ಯಾಮ್, ಜ್ಯಾಕ್ , ಜಾನ್ , ಸಮೀರ್ ಎಂದು ಹೆಸರು ಬದಲಿಸಿ ತನ್ನ ಕೃತ್ಯ ನಡೆಸುತ್ತಿದ್ದ. ಹಾಲಿ ಹೊನ್ನಾವರದ ದುರ್ಗಾಕೇರಿಯಲ್ಲಿ ಬಾಡಿಗೆ ಮನೆ ಮಾಡಿ ಇದ್ದ.
ಈತನನ್ನು ನ.11ರಂದು ಸೀನಿಮಯ ರೀತಿಯಲ್ಲಿ ಬೆನ್ನುಹತ್ತಿ ಪಂಜಾಬ್ ರಾಜ್ಯದ ಅಮೃತ್ಸರ ಗೋಲ್ಡನ್ ಟೆಂಪಲ್ ಹತ್ತಿರ ಬಂಧಿಸಿ ಕಳವು ಮಾಡಿದ್ದ 34.026 ಗ್ರಾಂ. ಬಂಗಾರದ ಒಡವೆ, 3 ಲಕ್ಷ ರೂ. ನಗದು ಹಣ ಸೇರಿ ಸುಮಾರು 5 ಲಕ್ಷದಷ್ಟು ಮಾಲನ್ನುವಶಪಡಿಸಿಕೊಳ್ಳಲಾಗಿದೆ. ಈತ ಕುಖ್ಯಾತ ಕಳ್ಳನಾಗಿದ್ದು, ಬೆಂಗಳೂರು ನಗರದ 11 ಪೊಲೀಸ್ ಠಾಣೆಗಳಲ್ಲಿ 106 ಪ್ರಕರಣಗಳು, ಗೋವಾ ರಾಜ್ಯದ 3 ಪೊಲೀಸ್ ಠಾಣೆಗಳಲ್ಲಿ 7 ಪ್ರಕರಣಗಳು, ಉತ್ತರ ಪ್ರದೇಶದ ನೋಯ್ದಾ ನಗರದಲ್ಲಿ 4, ಪೊಲೀಸ್ ಠಾಣೆಗಳಲ್ಲಿ 11 ಪ್ರಕರಣಗಳು, ಮತ್ತು ಪಂಜಾಬ್ ರಾಜ್ಯದ 2 ಪೊಲೀಸ್ ಠಾಣೆಗಳಲ್ಲಿ 4 ಪ್ರಕರಣಗಳು ಸೇರಿ ಒಟ್ಟು 128 ಪ್ರಕರಣಗಳು ದಾಖಲಾಗಿವೆ.
ಈ ಪ್ರಕರಣವನ್ನು ಭೇದಿಸಲು ಎಸ್ಪಿ ನಾರಾಯಣ ಎಂ , ಆಗಿನ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಟಿ.ಜಯಕುಮಾರ, ಹಾಗೂ ಈಗಿನ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ ಎಂ. ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು.