ರಾಜ್ಯದಲ್ಲಿ 7 ಸಾವಿರ ಶಾಲೆಗಳ ಕೊಠಡಿಗಳ ನಿರ್ಮಾಣ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹೊಸದಿಗಂತ ವರದಿ,ಮೈಸೂರು:

ರಾಜ್ಯದಲ್ಲಿ 7 ಸಾವಿರ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬುಧವಾರ ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿ ಬಿಜೆಪಿ ವಿಭಾಗ ವತಿಯಿಂದ ದಕ್ಷಿಣ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಪರವಾಗಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಖಾಸಗಿ ಶಾಲೆಗಳವರು ಎದುರಿಸುತ್ತಿರುವ ಸಮಸ್ಯೆಗಳನ್ನು ನನಗೆ ತಿಳಿಸಿದ್ದಾರೆ. ಶೀಘ್ರದಲ್ಲಿ ಸಿಹಿ ಸುದ್ದಿಯನ್ನು ನೀಡುತ್ತೇನೆ ಎಂದರು.
ಜನಸಂಖ್ಯೆ ನಮಗೆ ದೊಡ್ಡ ಮಾರಕವಾದರೂ, ವಿಶ್ವದಲ್ಲಿಯೇ ಶೇ 46 ರಷ್ಟು ಅತಿ ಹೆಚ್ಚಾಗಿ ಯುವಕರನ್ನು ಹೊಂದಿರುವ ದೇಶವಾಗಿದೆ. ಹಾಗಾಗಿ ನಮಗೆ ಶಕ್ತಿಯಾಗಿದೆ. ಯುವಕರಿಗೆ ಆಧುನಿಕ ಕೌಶಲ್ಯ ತರಬೇತಿ ನೀಡಲಾಗುವುದು. ಉದ್ಯಮಿಯಾಗಿ, ಉದ್ಯೋಗ ನೀಡು ಎಂಬ ಯೋಜನೆಯಡಿ, ಯುವಕರಿಗೆ ಯೋಜನೆ ರೂಪಿಸಿ, ಹಣಕಾಸು ವ್ಯವಸ್ಥೆ ಮಾಡಿ, 12 ಲಕ್ಷ ಮಂದಿ ಯುವಕರಿಗೆ ಉದ್ಯೋಗ ಕಲ್ಪಿಸಲಾಗುವುದು. 40 ರಿಂದ 50 ಲಕ್ಷ ಮಂದಿ ಯುವಕರಿಗೆ ಉದ್ಯೋಗ ನೀಡುವ ಪ್ರಯತ್ನ ನಡೆಸಲಾಗುವುದು. ಆರ್ಥಿಕತೆ ಬೆಳೆದರೆ, ಉದ್ಯೋಗ ಅವಕಾಶ ಸಿಗುತ್ತದೆ. ದುಡಿಯುವ ವರ್ಗ, ಕೃಷಿ ವಲಯಕ್ಕೆ ಉತ್ತೇಜನ ನೀಡಲಾಗುವುದು ಎಂದು ಹೇಳಿದರು.
21 ನೇ ಶತಮಾನ ಜ್ಞಾನದ ಶತಮಾನವಾಗಿದೆ. ಜ್ಞಾನ ಇದ್ದವರು ಜಗತ್ತನ್ನೇ ಆಳುತ್ತಾರೆ. ಹಾಗಾಗಿ ಪ್ರಮುಖ ಸ್ಥಾನಗಳಲ್ಲಿ ಯುವಕರು ಇರಬೇಕು. ಅದಕ್ಕಾಗಿ ಅವರಿಗೆಂದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಿ, ಎಲ್ಲಾ ರೀತಿಯ ಪ್ರೋತ್ಸಾಹಗಳನ್ನು ನೀಡುವ ಮೂಲಕ ಸಜ್ಜುಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!