ಹೊಸದಿಗಂತ ಕಲಬುರಗಿ:
ರಾಜ್ಯದಲ್ಲಿ ಏಕಕಾಲಕ್ಕೆ ನಡೆದ ಲೋಕಾಯುಕ್ತ ಅಧಿಕಾರಿಗಳ ದಾಳಿ ಸಂಬಂಧ ಪಟ್ಟಂತೆ ಕರ್ನಾಟಕ ಲೋಕಾಯುಕ್ತ ಕಲಬುರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಿಬಿಎಂಪಿ ಸಹಾಯಕ ಆಯುಕ್ತ ಬಸವರಾಜ ಮಾಗಿ ಲೋಕಾಯುಕ್ತ ಬಲೆಗೆ ಬಿದಿದ್ದಾರೆ, ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 11 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಶೋಧ ಕಾರ್ಯ ಸಮಯದಲ್ಲಿ ಪತ್ತೆ ಹಚ್ಚಲಾದ ಒಟ್ಟು ಸ್ಥಿರ ಆಸ್ತಿಯ ವಿವರಗಳು ಹೀಗಿದ್ದು, ಅಂದಾಜು ಮೌಲ್ಯ- 15 ನಿವೇಶನಗಳು, 2 ಮನೆಗಳು, 32 ಎಕರೆ 20 ಗುಂಟೆ ಕೃಷಿ ಜಮೀನು ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 3,08,30,000 ರೂಪಾಯಿ.
ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 2,32,410/- ನಗದು, 59,40,830/-
ಬೆಲೆ ಬಾಳುವ ಚಿನ್ನಾಭರಣಗಳು ಎಲ್ಲಾ ಸೇರಿ ಒಟ್ಟು ಮೌಲ್ಯ 61,73,240.ಜೊತೆಗೆ 583 ಕ್ಯಾಸಿನೋ
ಕಾಯಿನ್ಸ್ ಸೇರಿದಂತೆ ಒಟ್ಟು ಮೌಲ್ಯ 3,31,70,830 ಆಗಿದೆ ಎಂದು ಲೋಕಾಯುಕ್ತ ಪೋಲಿಸರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.