ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2025 – 26ನೇ ಸಾಲಿನ ಬಜೆಟ್ ಇಂದು ಮಂಡನೆ ಆಗ್ತಿದೆ. 19,000 ಕೋಟಿ ರೂ. ಬಜೆಟ್ ಮಂಡಿಸಲು ತಯಾರಿ ಮಾಡಲಾಗಿದೆ.
ಚುನಾಯಿತ ಪ್ರತಿನಿಧಿಗಳು ಇಲ್ಲದೇ 5ನೇ ಬಾರಿಗೆ ಬಿಬಿಎಂಪಿಯ ಅಧಿಕಾರಿಗಳು ಬಜೆಟ್ ಮಂಡನೆ ಮಾಡುತ್ತಿದ್ದಾರೆ. ತುಷಾರ್ ಗಿರಿನಾಥ್ ಅಧ್ಯಕ್ಷತೆಯಲ್ಲಿ ವಿಶೇಷ ಆಯುಕ್ತ ಹರೀಶ್ ಕುಮಾರ್ ಬಜೆಟ್ ಮಂಡಿಸಲಿದ್ದಾರೆ. ಈ ಬಜೆಟ್‌ನಲ್ಲಿ ಭಾರೀ ನಿರೀಕ್ಷೆ ಇಡಲಾಗಿದೆ. 7 ಸಾವಿರ ಕೋಟಿ ರೂ. ರ್ಕಾರದಿಂದ ನಿರೀಕ್ಷೆ ಇಟ್ಟುಕೊಂಡು ಬಜೆಟ್ ಮಂಡನೆ ಮಾಡಲಾಗ್ತಿದೆ. ಟೌನ್ ಹಾಲ್‌ನ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಬಜೆಟ್ ಮಂಡನೆ ಮಾಡ್ತಿದ್ದು. ಈ ಭಾರೀ ಬಜೆಟ್‌ನಲ್ಲಿ ಹಲವು ನಿರೀಕ್ಷೆಗಳನ್ನ ಇಡಲಾಗಿದೆ.
ರಸ್ತೆ ಗುಂಡಿ ಮುಕ್ತಿ, ನಗರದ ಸ್ವಚ್ಛತೆ, ಸುಗಮ ಸಂಚಾರ, ಹಸೀರಕರಣ, ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ಸಿಗಲಿದೆ, ಘನತ್ಯಾಜ್ಯ ನಿರ್ವಹಣೆ ಸಮಸ್ಯೆ ಪರಿಹರಿಸುವ ಯೋಜನೆ, ಪೂರ್ವ ಮತ್ತು ಪಶ್ಚಿಮ, ಉತ್ತರ ಮತ್ತು ದಕ್ಷಿಣ ಭಾಗದ ಸುರಂಗ ನಿರ್ಮಾಣದ ಯೋಜನೆ ಬಗ್ಗೆ ಪ್ರಸ್ತಾಪ, ರಸ್ತೆಗಳಲ್ಲಿ ನೀರು ನಿಲ್ಲದಂತೆ ಪ್ರವಾಹ ನಿಯಂತ್ರಣಕ್ಕೆ ಯೋಜನೆ, ಇಂದಿರಾ ಕ್ಯಾಂಟೀನ್ ಗೆ ಹೆಚ್ಚಿನ ಅನುದಾನ, ಹೆಚ್ಚುವರಿಯಾಗಿ 52 ಹೊಸ ಇಂದಿರಾ ಕ್ಯಾಂಟೀನ್ ನಿರ್ಮಾಣ ಸಾಧ್ಯತೆ ಬಗ್ಗೆ ಬಜೆಟ್‌ನಲ್ಲಿ ಮಾತುಕತೆ ನಡೆಯಲಿದೆ, ಪ್ರತಿ ವಿಧಾನಸಭ ಕ್ಷೇತ್ರಕ್ಕೆ ಅಂಬ್ಯೂಲೆನ್ಸ್ ಘೋಷಣೆ ಸಾಧ್ಯತೆ ಇದೆ, ಬಿಬಿಎಂಪಿ 20 ಆಸ್ಫತ್ರೆ ಗಳನ್ನ ಮೇಲ್ದರ್ಜೆಗೆ ಏರಿಸಲಿದ್ದಾರೆ ಎನ್ನಲಾಗಿದ್ದು ಇದನ್ನೂ ಸೇರಿ ಇನ್ನಿತರ ನಿರೀಕ್ಷೆಗಳು ಇವೆ.