ಪಟ್ಟಣಗೆರೆ ಶೆಡ್ ಮಾಲೀಕರಿಗೆ BBMP ನೊಟೀಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ ದರ್ಶನ್ ಹಾಗೂ ಗ್ಯಾಂಗ್ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯ ಹತ್ಯೆಯನ್ನು ಬೆಂಗಳೂರಿನ ಆರ್.ಆರ್.ನಗರ ಬಳಿಯ ಪಟ್ಟಣಗೆರೆ ಶೆಡ್ ನಲ್ಲಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಹೀಗಾಗಿ ಈ ಘಟನೆ ನಡೆದ ಶೆಡ್ ನ ಮಾಲೀಕರಿಗೆ ಬಿಬಿಎಂಪಿ ನೊಟೀಸ್ ನೀಡಿದೆ.

ಈ ಜಾಗದ ಮಾಲೀಕ ಕೆ.ಜಯಣ್ಣಗೆ ಬಿಬಿಎಂಪಿ ನೊಟೀಸ್ ನೀಡಿದೆ. ಶೆಡ್ ಮಾಲೀಕ ಜಯಣ್ಣ, ನಿಗದಿತ ಜಾಗಕ್ಕೆ ಬಿಬಿಎಂಪಿಗೆ ಆಸ್ತಿ ತೆರಿಗೆ ಪಾವತಿ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಆರ್.ಆರ್.ನಗರ ವಲಯ ಸಹಾಯಕ ಕಂದಾಯ ಅಧಿಕಾರಿಗಳು ಜಯಣ್ಣಗೆ ನೊಟೀಸ್ ನೀಡಿದ್ದು, 15 ದಿನಗಳ ಒಳಗೆ ಸಂಬಂಧಪಟ್ಟ ದಾಖಲೆ ಸಮೇತ ಕಾರಣ ನೀಡುವಂತೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!