ಜಲ ಕ್ರೀಡೆಯಾಡಿ ಗಾಯಗೊಂಡ್ರಾ ಜಡೇಜಾ? ಸ್ಟಾರ್ ಆಲ್‌ರೌಂಡರ್ ವಿರುದ್ಧ ಬಿಸಿಸಿಐ ಗರಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೊಣಕಾಲಿನ ಗಾಯಕ್ಕೀಡಾಗಿರುವುದರಿಂದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಟಿ20 ವಿಶ್ವಕಪ್‌ ನಲ್ಲಿ ಟೀಂ ಇಂಡಿಯಾ ಪರ ಕಾಣಿಸಿಕೊಳ್ಳುವುದು ಅನುಮಾನವಾಗಿದೆ. ಜಡೇಜಾ ಸ್ವತಃ ತಾವೇ ಮಾಡಿಕೊಂಡ ಎಡವಟ್ಟೊಂದರ ಫಲವಾಗಿ ಗಾಯಕ್ಕೆ ತುತ್ತಾಗಿದ್ದು, ಈ ವಿಚಾರ ತಿಳಿಯುತ್ತಲೇ ಬಿಸಿಸಿಐ ಗರಂ ಆಗಿದೆ.
ಜಡೇಜಾ ಏಷ್ಯಾಕಪ್‌ ನಲ್ಲಿ ಗಾಯಗೊಳ್ಳುವವರೆಗೂ ಉತ್ತಮವಾಗಿ ಆಡಿದ್ದರು. ಪಾಕಿಸ್ತಾನದ ವಿರುದ್ಧದ ಮೊದಲ ಪಂದ್ಯದಲ್ಲಿ, ಮ್ಯಾಚ್-ವಿನ್ನಿಂಗ್ 35 ರನ್‌ ಹಾಗೂ ಎರಡು ಓವರ್‌ಗಳಲ್ಲಿ 0/11 ನೀಡಿದ್ದರು. ಹಾಂಗ್ ಕಾಂಗ್ ವಿರುದ್ಧದ ಮುಂದಿನ ಪಂದ್ಯದಲ್ಲಿ ಬ್ಯಾಟಿಂಗ್ ಮಾಡದಿದ್ದರೂ 15 ರನ್‌ ಗೆ ಒಂದು ವಿಕೆಟ್‌ ಕಬಳಿಸಿದ್ದರು. ಜಡೇಜಾ ಹೊರಬಿದ್ದ ಬಳಿಕ ಟೀಂ ಇಂಡಿಯಾ ತಂಡದ ಸಂಯೋಜನೆಯಲ್ಲಿ ವ್ಯತ್ಯಾಸವಾಗಿ ಸೂಪರ್‌ 4 ಹಂತದಿಂದಲೇ ಹೊರಬಿದ್ದಿತ್ತು. ಈ ನಡುವೆ ತಿಳಿದುಬಂದ ವಿಚಾರವೆಂದರೆ ಜಡೇಜಾ ಮೈದಾನದಲ್ಲಿ ಗಾಯಗೊಂಡಿಲ್ಲ. ಬದಲಾಗಿ ಜಲ ಕ್ರೀಡೆ ಆಡುವಾಗ ಮಾಡಿಕೊಂಡಿದ್ದ ಪೆಟ್ಟು ಪಂದ್ಯವಾಡುವಾಗ ಗಂಭೀರವಾಗಿ ಉಲ್ಭಣಿಸಿ ತಂಡದಿಂದ ಹೊರಗುಳಿದಿದ್ದಾರೆ. ಈ ವಿಚಾರವಾಗಿ ಬಿಸಿಸಿಐ ಕೆಂಡಾಮಂಡಲವಾಗಿದೆ.
“ಜಡೇಜಾ ನಡವಳಿಕೆಯಿಂದ ನಾವು ಸಂತೋಷವಾಗಿಲ್ಲ, ಅವರು ಸಾಹಸ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮುನ್ನ ಮುಂದಿನ ವಿಶ್ವಕಪ್ ಅನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕಾಗಿತ್ತು. ಆದರೆ ಈ ವಿಚಾರವಾಗಿ ಜವಾಬ್ದಾರಿಯುತವಾಗಿ ವರ್ತಿಸಲಿಲ್ಲ ಮತ್ತು ವಿಶ್ವಕಪ್ ಹತ್ತಿರದ ಹಾದಿಯಲ್ಲಿದೆ ಎಂದು ಭಾವಿಸಲಿಲ್ಲ. ಜಡೇಜಾ ಅವರ ಈ ನಡವಳಿಕೆ ಬೇಸರ ತರಿಸಿದೆʼ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಬೇಸರ ಹೊರಹಾಕಿದ್ದಾರೆ.
ಮಂಗಳವಾರ ಜಡೇಜಾ ಅವರ ಮೊಣಕಾಲಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಆಲ್‌ರೌಂಡರ್ ಶೀಘ್ರದಲ್ಲೇ ಪುನರ್ವಸತಿ ಪ್ರಾರಂಭಿಸಲಿದ್ದಾರೆ. ಟಿ 20 ವಿಶ್ವಕಪ್‌ ಗೆ ಮುನ್ನ ಜಡೇಜಾ ಮೈದಾನಕ್ಕೆ ಮರಳುವ ನಿರೀಕ್ಷೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!