ಬಿಡಿಎ ಮಧ್ಯಮರ್ತಿಗಳು, ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಎಸಿಬಿ ಶಾಕ್

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬೆಳ್ಳಂಬೆಳಗ್ಗೆ ದಾಳಿ ನಡೆಸುವ ಮೂಲಕ ಸರಕಾರಿ ಅಧಿಕಾರಿಗಳಿಗೆ ಶಾಕ್​ ನೀಡಿದೆ. ಏಕಕಾಲಕಕ್ಕೆ ಬೆಂಗಳೂರಿನ 9 ಕಡೆಗಳಲ್ಲಿ ನೂರಾರು ಅಧಿಕಾರಿಗಳಿಂದ ದಾಳಿ ನಡೆಸಲಾಗಿದೆ.

ಇಂದು ಮುಂಜಾನೆ ಎಸ್​ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಸರಕಾರಿ ಅಧಿಕಾರಿಗಳ ಮನೆ, ಕಚೇರಿ ಹಾಗೂ ಇತರ ನಿವೇಶನಗಳ ಮೇಲೆ ದಾಳಿ ನಡೆಸಿದ್ದು, ಕಡತಗಳ ಪರಿಶೀಲನೆ ನಡೆಸಲಾಗುತ್ತಿದೆ. ಕೇವಲ ಸರಕಾರಿ ಅಧಿಕಾರಿಗಳಷ್ಟೇ ಅಲ್ಲದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದ ಮಧ್ಯವರ್ತಿಗಳ ನಿವಾಸದ ಮೇಲೆಯೂ ಎಸಿಬಿ ದಾಳಿ ಮಾಡಿದೆ.

ಚಾಮರಾಜಪೇಟೆಯ ರಾಘು ಬಿ.ಎನ್., ಆರ್.ಟಿ. ನಗರ ಮನೋರಾಯನಪಾಳ್ಯದ ಮೋಹನ್, ದೊಮ್ಮಲೂರು ಮನೋಜ್, ಮಲ್ಲತಹಳ್ಳಿ ಮುನಿರತ್ನ, ಆರ್ ಆರ್ ನಗರದ ತೇಜು ಅಲಿಯಾಸ್​ ತೇಜಸ್ವಿ, ಮಲ್ಲತಹಳ್ಳಿ ಮುದ್ದಿನಪಾಳ್ಯದ ಅಶ್ವಥ್, ಚಾಮುಂಡೇಶ್ವರಿನಗರ ಬಿಡಿಎ ಲೇಔಟ್ ರಾಮ, ಚಾಮುಂಡೇಶ್ವರಿನಗರ ಬಿಡಿಎ ಲೇಔಟ್ ಲಕ್ಷ್ಮಣ, ಮುದ್ದಿನಪಾಳ್ಯದ ಚಿಕ್ಕಹನುಮಯ್ಯ ಅವರ ಮನೆ ಮತ್ತು ಕಚೇರಿಗಳ ಮೇಲೆ ಎಸಿಬಿ ದಾಳಿ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here