ಅನೇಕ ಜನರು ಬೆಳಿಗ್ಗೆ ಏಳುವಾಗ ಆಯಾಸ ಮತ್ತು ಆಲಸ್ಯವನ್ನು ಅನುಭವಿಸುತ್ತಾರೆ. ಇದಕ್ಕೆ ಹಲವು ಕಾರಣಗಳಿವೆ. ಮುಖ್ಯ ಕಾರಣಗಳು ದೀರ್ಘಕಾಲದ ಕಾಯಿಲೆಗಳು, ನಿದ್ರೆಯ ಕೊರತೆ, ಕಳಪೆ ಆಹಾರ, ಅನಿಯಮಿತ ದೈನಂದಿನ ದಿನಚರಿ ಮತ್ತು ದೇಹದಲ್ಲಿನ ಅಧಿಕ ಆಮ್ಲ.
ಕಠಿಣ ಪರಿಶ್ರಮದಿಂದ ಪ್ರತಿಯೊಬ್ಬರೂ ಆಯಾಸವನ್ನು ಅನುಭವಿಸುತ್ತಾರೆ. ಆದರೆ, ಕೆಲವರಿಗೆ ರಾತ್ರಿ ಚೆನ್ನಾಗಿ ನಿದ್ದೆ ಮಾಡಿದರೂ ಬೆಳಗ್ಗೆ ಸುಸ್ತಾಗುತ್ತೆ. ನಿಮ್ಮ ದಿನಚರಿ ಮತ್ತು ಆಹಾರಕ್ರಮವನ್ನು ಬದಲಾಯಿಸುವ ಮೂಲಕ ನೀವು ಈ ಸಮಸ್ಯೆಯನ್ನು ತೊಡೆದುಹಾಕಬಹುದು.
ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ಸುಸ್ತು ಉಂಟಾಗುತ್ತದೆ. ಹಾಗಾಗಿ ಸಾಕಷ್ಟು ನೀರು ಕುಡಿಯುವುದನ್ನು ರೂಢಿಸಿಕೊಳ್ಳಿ.
ನೀವು ದಣಿದಿರುವಾಗ ಚಾಕೊಲೇಟ್ ತಿನ್ನಿರಿ. ಚಾಕೊಲೇಟ್ ತಕ್ಷಣವೇ ಆಯಾಸವನ್ನು ನಿವಾರಿಸುತ್ತದೆ. ಕೋಕೋದಲ್ಲಿ ಆಯಾಸವನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ.
ಪ್ರತಿದಿನ ಒಂದೇ ಸಮಯಕ್ಕೆ ಮಲಗಿ ಏಳುವುದನ್ನು ರೂಢಿಸಿಕೊಳ್ಳಿ. ಬೇಗ ಮಲಗಿ ಬೇಗ ಏಳುವುದನ್ನು ರೂಢಿ ಮಾಡಿಕೊಳ್ಳಿ.
ಎದ್ದ ತಕ್ಷಣ ತಣ್ಣೀರಿನಲ್ಲಿ ಸ್ನಾನ ಮಾಡಿ. ಇದು ನಿಮ್ಮನ್ನು ರಿಫ್ರೆಶ್ ಮಾಡುತ್ತದೆ. ಜೊತೆಗೆ ರಕ್ತ ಸಂಚಾರ ಸುಗಮವಾಗುತ್ತದೆ.