ಹೊಸದಿಗಂತ ಡಿಜಿಟಲ್ ಡೆಸ್ಕ್:
ದರ್ಶನ್ ಮತ್ತು ಗ್ಯಾಂಗ್ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಹಂತಕರು ಇವರೇ ಎಂದು ಮಣ್ಣು ಕೂಡ ಅವರ ವಿರುದ್ಧ ಪ್ರಮುಖ ಸಾಕ್ಷಿಯಾಗಿದೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.
ಹೌದು, ಈ ಪ್ರಕರಣದಲ್ಲಿ ಪೊಲೀಸರು ಮಣ್ಣನ್ನು ಅಪರೂಪದ ಸಾಕ್ಷಿ ಎಂದು ಪರಿಗಣಿಸುತ್ತಾರೆ. ತನಿಖೆ ವೇಳೆ ಪೊಲೀಸರು ಆರೋಪಿಗಳ ಶೂ ಹಾಗೂ ಚಪ್ಪಲಿಯಿಂದ ಮಣ್ಣನ್ನು ಸಂಗ್ರಹಿಸಿ ಕೃಷಿ ವಿಜ್ಞಾನ ಕೇಂದ್ರಕ್ಕೆ ಕಳುಹಿಸಿ ವರದಿ ಪಡೆದುಕೊಂಡಿದ್ದಾರೆ. ಆರೋಪಿಗಳ ಶೂ ಮತ್ತು ಚಪ್ಪಲಿಯಲ್ಲಿನ ಮಣ್ಣು ಹಾಗೂ ಶೆಡ್ ಬಳಿಯಿರುವ ಮಣ್ಣು ಹೊಂದಿಕೆಯಾಗಿರುವುದನ್ನು ಚಾರ್ಜ್ ಶೀಟ್ ನಲ್ಲಿ ಪೊಲೀಸರು ಗಮನಿಸಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್, ವಿನಯ್, ರಾಘವೇಂದ್ರ, ನಾಗರಾಜ್ ಅವರ ಚಪ್ಪಲಿಗಳಿಗೆ ಅಂಟಿಕೊಂಡಿದ್ದ ಮಣ್ಣನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಪೊಲೀಸರ ಪ್ರಕಾರ, ದೇಶದಲ್ಲೇ ಮೊದಲ ಬಾರಿಗೆ ಮಣ್ಣಿನ ವರದಿ ಪಡೆದು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ ಪ್ರಕರಣ ಇದಾಗಿದೆ ಎಂದು ತಿಳಿಸಿವೆ.