BE AWARE | ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಇದ್ರೆ ಮುಂದೆ ಅಪಾಯಕಾರಿ ರೋಗಗಳಿಗೆ ಕಾರಣ ಆಗಬಹುದು ಎಚ್ಚರ

ಬೊಜ್ಜಿನ ಸಮಸ್ಯೆ ಮಕ್ಕಳಲ್ಲಿ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಇದರಿಂದ ಮಕ್ಕಳು ಅನೇಕ ರೋಗಗಳಿಗೆ ತುತ್ತಾಗುವ ಅಪಾಯವಿದೆ. ಸಮಸ್ಯೆ ಗಂಭೀರವಾಗುವ ಮುನ್ನವೇ ಕೆಲವು ಮುನ್ನೆಚ್ಚರಿಕೆ ವಹಿಸಿದರೆ ಬೊಜ್ಜಿನಿಂದ ಹೊರಬರಬಹುದು.

ಕನಿಷ್ಠ 10 ರಿಂದ 12 ಗ್ಲಾಸ್ ನೀರನ್ನು ಕುಡಿಯಲು ಮಕ್ಕಳನ್ನು ಪ್ರೋತ್ಸಾಹಿಸಿ. ದೇಹದಲ್ಲಿ ನೀರಿನ ಕೊರತೆಯಿಂದ ಆರೋಗ್ಯಕ್ಕೆ ಏನು ಹಾನಿಯಾಗಬಹುದು ಎಂಬುದನ್ನು ಮನವರಿಕೆಯಾಗಿ ವಿವರಿಸಿ. ನೀರು ಕುಡಿಯುವುದರಿಂದ ದೇಹವು ಹೈಡ್ರೇಟ್ ಆಗುವುದಲ್ಲದೆ ತೂಕವನ್ನು ನಿಯಂತ್ರಣದಲ್ಲಿಡುತ್ತದೆ.

ದೈಹಿಕ ಚಟುವಟಿಕೆಯೂ ಅಗತ್ಯ. ಪಾಲಕರು ತಮ್ಮ ಮಕ್ಕಳನ್ನು ನೃತ್ಯ ಅಥವಾ ಕರಾಟೆಯಂತಹ ತರಗತಿಗಳಿಗೆ ಸೇರಿಸಬಹುದು. ಇದು ನಿಮ್ಮ ದೇಹವನ್ನು ಕ್ರಿಯಾಶೀಲವಾಗಿರಿಸುತ್ತದೆ. ದೈಹಿಕ ಬೆಳವಣಿಗೆ ಮಾತ್ರವಲ್ಲ, ಮಕ್ಕಳ ಕೌಶಲ್ಯಗಳ ಬೆಳವಣಿಗೆಯೂ ಸಾಧ್ಯ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!