ಪ್ರತಿಯೊಬ್ಬರೂ ಹೈ ಹೀಲ್ಸ್ ಧರಿಸಲು ಇಷ್ಟಪಡುತ್ತಾರೆ. ಆದರೆ ಇದರಿಂದ ನಿಮ್ಮ ಪಾದಗಳು ತುಂಬಾ ನೋಯುತ್ತವೆ ಎಂದು ನಿಮಗೆ ತಿಳಿದಿದೆಯೇ? ಇದಕ್ಕೆ ಕಾರಣ ಏನು ಗೊತ್ತಾ?
ಎತ್ತರದ ಹಿಮ್ಮಡಿಯ ಬೂಟುಗಳನ್ನು ಧರಿಸುವುದರಿಂದ ನಿಮ್ಮ ಬೆನ್ನು, ಕಾಲ್ಬೆರಳುಗಳು ಮತ್ತು ಕಾಲುಗಂಟುಗಳ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ನೋವು ಉಂಟಾಗುತ್ತದೆ. ನಿರಂತರವಾಗಿ ಹೀಲ್ಸ್ ಧರಿಸುವುದರಿಂದ ನಿಮ್ಮ ವಾಕಿಂಗ್ ಭಂಗಿಯನ್ನು ಬದಲಾಯಿಸಬಹುದು. ಸಮತೋಲನವನ್ನು ಕಾಯ್ದುಕೊಳ್ಳಲು ನಿಮ್ಮ ಕಾಲುಗಳನ್ನು ಸ್ವಿಂಗ್ ಮಾಡುವುದರ ಜೊತೆಗೆ, ಬೆನ್ನುಹುರಿಯ ಮೇಲೆ ಹೆಚ್ಚಿನ ಒತ್ತಡಕ್ಕೆ ಕಾರಣವಾಗಬಹುದು.
ಇವು ಪಾದವನ್ನು ಅಂಕುಡೊಂಕಾಗಿ ಇಟ್ಟುಕೊಳ್ಳುವಂತೆ ಮಾಡುವುದರಿಂದ ಕಾಲಿನ ಬೆರಳುಗಳಿಗೆ ಸರಿಯಾಗಿ ರಕ್ತ ಪರಿಚಲನೆಯೂ ಆಗದಿರಬಹುದು. ಹಾಗಾಗಿ ನಿತ್ಯ ಎತ್ತರದ ಚಪ್ಪಲಿ ಧರಿಸುವ ಮುನ್ನ ದೇಹದ ಆರೋಗ್ಯದ ಕಡೆಗೂ ಗಮನ ಕೊಡಿ.