ಗ್ರಹಣದಂದು ಎಚ್ಚರವಾಗಿರಿ: ಮಕ್ಕಳ ಬಗೆಗೆ ಮೈಮರೆತರೆ ಅಪಾಯ ಕಟ್ಟಿಟ್ಟಬುತ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಸಂಜೆ ಸೂರ್ಯ ಗ್ರಹಣವೂ ಸಂಭವಿಸಲಿದೆ, ಈ ಖಗೋಳ ವಿಸ್ಮಯ ಕಣ್ಣುಗಳಿಗೆ ಅತ್ಯಂತ ಅಪಾಯಕಾರಿಯಾಗಿದ್ದು, ವೀಕ್ಷಣೆ ಮಾಡುವುದಾದರೂ ಈ ಬಗ್ಗೆ ಸೂಕ್ತ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ತಜ್ಞರು ಎಚ್ಚರಿಸಿದ್ದಾರೆ. ಅದರಲ್ಲೂ ಮಕ್ಕಳ ವಿಚಾರದಲ್ಲಿ ಹೆಚ್ಚಿನ  ಜಾಗೃತೆ  ವಹಿಸಬೇಕಾದ ಕೆಲವು ಅಂಶಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

  • ಗ್ರಹಣ ವೀಕ್ಷಣೆಗೆ ಸೌರ ವೀಕ್ಷಣೆ, ಗ್ರಹಣ ಕನ್ನಡಕ (ಎಕ್ಲಿಪ್ಸ್ ಗ್ಲಾಸ್), ದೂರದರ್ಶಕಗಳ ಬಳಕೆ ಮಾಡಿ
  • ಗ್ರಹಣ ಅವಧಿಯಲ್ಲಿ ಆಕಾಶದತ್ತ ಕಣ್ಣು ಹಾಯಿಸುವುದಾದರೆ ಕಣ್ಣಿನ ರಕ್ಷಣೆಗೆ ಅಗತ್ಯ ಸಾಧನ ಬಳಸಿ.
  • ಗ್ರಹಣ ವೀಕ್ಷಣೆಗೆ ಸನ್‌ಗ್ಲಾಸ್ ಬಳಕೆ ಎಂದೂ ಮಾಡಬೇಡಿ.
  • ಮೊಬೈಲ್ ಅಥವಾ ಕ್ಯಾಮರಾದಲ್ಲಿ ಗ್ರಹಣದ ಚಿತ್ರಗಳನ್ನು ತೆಗೆಯುವುದನ್ನು ತಪ್ಪಿಸಿ.
  • ಗ್ರಹಣ ವೀಕ್ಷಣೆ ಸ್ಥಳಗಳಿಂದ ಮಕ್ಕಳನ್ನು ದೂರವಿಡಿ, ಮಕ್ಕಳು ನೇರವಾಗಿ ಗ್ರಹಣ ವೀಕ್ಷಿಸದಂತೆ ಎಚ್ಚರಿಕೆ ವಹಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!