ಈಗೆಲ್ಲಾ ಸಗಣಿಯ ಬೆರಣಿಯಿಂದ ಹಿಡಿದು, ಫ್ರಿಡ್ಜ್, ಲ್ಯಾಪ್‌ಟಾಪ್ ಕೂಡ ಆನ್‌ಲೈನ್‌ನಲ್ಲಿಯೇ ಆರ್ಡರ್ ಮಾಡಬಹುದಾಗಿದೆ. ಆನ್‌ಲೈನ್‌ನಲ್ಲಿ ಒಳ್ಳೊಳ್ಳೆ ಆಫರ್‌ನಲ್ಲಿ ಕಡಿಮೆ ಹಣಕ್ಕೆ ಖರೀದಿ ಮಾಡಿದವರೂ ಇದ್ದಾರೆ. ಹಾಗೆ ಮೋಸ ಹೋದವರೂ ಇದ್ದಾರೆ. ಆನ್‌ಲೈನ್ ಶಾಪಿಂಗ್ ಮುನ್ನ ಇವನ್ನು ನೆನಪಿಡಿ…
- ನಿಮ್ಮ ನೆಟ್‌ವರ್ಕ್ ಸೆಕ್ಯೂರ್ ಆಗಿರಲಿ, ಸಾರ್ವಜನಿಕ ವೈಫೈ ಬಳಸಿ ಆರ್ಡರ್ ಮಾಡಬೇಡಿ.
- ಆರ್ಡರ್ ಮಾಡುವ ಮುನ್ನ ವೆಬ್‌ಸೈಟ್ ಬಗ್ಗೆ ತಿಳಿದುಕೊಳ್ಳಿ. ಉತ್ತಮ ವೆಬ್ ಆಗಿದ್ದಲ್ಲಿ ಮಾತ್ರ ಖರೀದಿ ಮಾಡಿ.
- ಕೆಲವೊಂದು ಆಫರ‍್ಸ್ ಹೇಗಿರುತ್ತದೆ ಎಂದರೆ ನಂಬೋದಕ್ಕೆ ಅಸಾಧ್ಯ ಎನಿಸುತ್ತದೆ. ಅಂಥದ್ದನ್ನು ನಂಬಬೇಡಿ.
- ರಿಟರ್ನ್, ಎಕ್ಸ್‌ಚೇಂಜ್ ಪಾಲಿಸಿ ಬಗ್ಗೆ ತಿಳಿದು ನಂತರ ಖರೀದಿ ಮಾಡಿ.
- ನಿಮ್ಮ ಉತ್ಪನ್ನ ಖರೀದಿಗೆ ಎಷ್ಟು ಮಾಹಿತಿ ಬೇಕೋ ಅಷ್ಟಿದ್ದರೆ ಸಾಕು, ಹೆಚ್ಚಿಗೆ ಮಾಹಿತಿ ಕೇಳಿದರೆ ಆ ಆಪ್ ಬಳಕೆ ಮಾಡಬೇಡಿ.
- ಇದಕ್ಕೆ ಬಳಸುವ ಯೂಸರ್ ಐಡಿ ಹಾಗೂ ಪಾಸ್‌ವರ್ಡ್ ವಿಭಿನ್ನವಾಗಿರಲಿ, ಎಲ್ಲಾದಕ್ಕೂ ಒಂದೇ ಪಾಸ್‌ವರ್ಡ್ ಬೇಡ.
- ಪೇಮೆಂಟ್ ಮಾಡೋದಕ್ಕೆ ಭಯ ಎನಿಸಿದರೆ ಸದಾ ಕ್ಯಾಶ್ ಆನ್ ಡೆಲಿವರಿ ಆಪ್ಷನ್ ನೀಡಿ.
- ಯಾವುದನ್ನೇ ಖರೀದಿಸುವ ಮುನ್ನ ಕಸ್ಟಮರ್ ರಿವ್ಯೂ ಪರೀಕ್ಷಿಸಿ. ಕೆಲವೊಮ್ಮೆ ಅದೂ ಕೂಡ ಹಣ ಕೊಟ್ಟು ಬರೆಸಿದ ರಿವ್ಯೂ ಆಗಿರುತ್ತದೆ ಗಮನ ಇರಲಿ