July 23, 2026
Thursday, July 23, 2026
spot_img

ಪಾರಿವಾಳಗಳಿಗೆ ಎಲ್ಲೆಂದರಲ್ಲಿ ಕಾಳ್ ಹಾಕಿದ್ರೆ ಹುಷಾರ್: ಫೀಡಿಂಗ್‌ಗೆ ಬಂತು ಹೊಸ ಮಾರ್ಗಸೂಚಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವ ಪದ್ಧತಿಗೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಜಾರಿಗೊಳಿಸಿದೆ. ಇನ್ನು ಮುಂದೆ ಅಪಾರ್ಟ್‌ಮೆಂಟ್‌ಗಳ ಟೆರೆಸ್, ಬಾಲ್ಕನಿ, ರಸ್ತೆ, ಫುಟ್‌ಪಾತ್‌ಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವುದನ್ನು ನಿಯಂತ್ರಿಸಲಾಗುತ್ತದೆ.

ಹೊಸ ನಿಯಮದ ಪ್ರಕಾರ, ಪಾರಿವಾಳಗಳಿಗೆ ಆಹಾರ ನೀಡುವುದು ಸ್ಥಳೀಯ ಸಂಸ್ಥೆಗಳು ಗುರುತಿಸುವ ವಿಶೇಷ ಫೀಡಿಂಗ್‌ ವಲಯಗಳಲ್ಲಿ ಮಾತ್ರ ಅನುಮತಿಸಲಾಗುತ್ತದೆ. ಬೆಳಗ್ಗೆ 7ರಿಂದ 9 ಗಂಟೆಯವರೆಗೆ ಮಾತ್ರ ಆಹಾರ ನೀಡಲು ಅವಕಾಶ ಇರಲಿದೆ.

ಗುರುತಿಸಲಾದ ಸ್ಥಳಗಳ ನಿರ್ವಹಣೆಯನ್ನು ಅಧಿಕೃತ ಎನ್‌ಜಿಒಗಳು ಅಥವಾ ಸೇವಾ ಸಂಸ್ಥೆಗಳಿಗೆ ನೀಡಲಾಗುತ್ತದೆ. ಪಾರಿವಾಳಗಳ ಹಿಕ್ಕೆ, ಗರಿಗಳು ಹಾಗೂ ಉಳಿದ ಆಹಾರವನ್ನು ಸ್ವಚ್ಛಗೊಳಿಸುವ ಜವಾಬ್ದಾರಿ ಅವರದ್ದಾಗಿರುತ್ತದೆ.

ಇದನ್ನೂ ಓದಿ:

ರಸ್ತೆ, ಕಟ್ಟಡಗಳ ಮೇಲ್ಛಾವಣಿ, ಬಾಲ್ಕನಿ ಹಾಗೂ ಜನವಸತಿ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವುದನ್ನು ತಡೆಯುವಂತೆ ನಿವಾಸಿಗಳ ಸಂಘಗಳಿಗೆ ಸೂಚಿಸಲಾಗಿದೆ. ಬ್ರೆಡ್, ಬೇಯಿಸಿದ ಆಹಾರ ಹಾಗೂ ತ್ಯಾಜ್ಯ ವಸ್ತುಗಳನ್ನು ಪಾರಿವಾಳಗಳಿಗೆ ನೀಡುವುದನ್ನು ನಿಷೇಧಿಸಲಾಗಿದೆ.

ಪಾರಿವಾಳಗಳ ಹಿಕ್ಕೆ ಹಾಗೂ ಗರಿಗಳಿಂದ ಉಂಟಾಗುವ ಧೂಳಿನ ಕಣಗಳು ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬ ಕಾರಣಕ್ಕೆ ಆರೋಗ್ಯ ಇಲಾಖೆ ಈ ಕ್ರಮ ಕೈಗೊಂಡಿದೆ. ವಿಮಾನ ನಿಲ್ದಾಣಗಳ ಸಮೀಪ ಪಾರಿವಾಳಗಳ ಗುಂಪು ಸೇರುವುದನ್ನು ಕೂಡ ನಿಷೇಧಿಸಲಾಗಿದೆ, ಏಕೆಂದರೆ ಇದರಿಂದ ವಿಮಾನಗಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !