ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ನಟ ದರ್ಶನ್ ಜೈಲಿನಲ್ಲಿದ್ರೂ ಅವರ ಅಭಿಮಾನಿಗಳು ಅದನ್ನೇ ವೈಭವೀಕರಿಸ್ತಿದ್ದಾರೆ. ದರ್ಶನ್‌ಗೆ ಜೈಲು ಅಥವಾ ನಿರಪರಾಧಿ ಎಂದು ಹೊರಗೆ ಬರುವ ಮುನ್ನವೇ ಜನರೇ ತೀರ್ಮಾನಿಸಿ ತಮ್ಮ ನಟನನ್ನು ಪೂಜಿಸುತ್ತಿದ್ದಾರೆ.
ಈ ವರ್ತನೆ ಅತಿರೇಕಕ್ಕೆ ಹೋಗಿದ್ದು, ಗಾಡಿಗಳ ಮೇಲೆ ದರ್ಶನ್ ಬಗ್ಗೆ ಲೈನ್ಸ್, ಕೈದಿ ಸಂಖ್ಯೆಯನ್ನು ಹಾಕಿಸಿಕೊಂಡು ಓಡಾಡುತ್ತಿದ್ದಾರೆ. ಆದರೆ ಈ ರೀತಿ ಮಾಡುವವರಿಗೆ ಆರ್‌ಟಿಓ ಎಚ್ಚರಿಕೆ ಕೊಟ್ಟಿದೆ.
ಹೆಚ್ಚುವರಿ ಸಾರಿಗೆ ಆಯುಕ್ತ ಸಿ. ಮಲ್ಲಿಕಾರ್ಜುನ್ ಅವರು ಆದೇಶ ಹೊರಡಿಸಿದ್ದು, ಇತ್ತೀಚಿನ ದಿನಗಳಲ್ಲಿ ವಾಹನಗಳ ಮೇಲೆ ಬೇರೆ ಬೇರೆ ರೀತಿಯ ಬರಹಗಳನ್ನು ಅಳವಡಿಸಿಕೊಳ್ಳುವುದು ಹೆಚ್ಚಾಗಿ ಕಂಡುಬರುತ್ತಿದೆ. ಈ ಹಿಂದೆ ಈ ಮಟ್ಟಿಗೆ ಬರಹಗಳನ್ನ ವಾಹನಗಳ ಮೇಲೆ ಹಾಕಿರಲಿಲ್ಲ. ಈ ಬಗ್ಗೆ ಆರ್‌ಟಿಒ ಇಲಾಖೆ ಹಾಗೂ ಪೊಲೀಸ್ ಇಲಾಖೆ ಗಮನಕ್ಕೆ ಬಂದಿದ್ದು, ಅನವಶ್ಯಕ ಬರಹಗಳು ಕಂಡುಬಂದಲ್ಲಿ ಕ್ರಮ ತೆಗೆದುಕೊಳ್ಳೂತ್ತೇವೆಂದು ಹೇಳಿದ್ದಾರೆ.
ನಂಬರ್ ಪ್ಲೇಟ್ ಯಾವ ರೀತಿ ಇರಬೇಕು ಎಂದು ಸರ್ವೋಚ್ಛ ನ್ಯಾಯಾಲಯವು ನಮಗೆ ನಿರ್ದೇಶನ ನೀಡಿದ್ದು, ಅದರ ಅನ್ವಯ ನಾವು ಪ್ರಕರಣಗಳನ್ನು ದಾಖಲು ಮಾಡುತ್ತಾ ಬಂದಿದ್ದೇವೆ. ಮನೆ ಹೆಸರು, ಮನೆತನದ ಹೆಸರು, ಇಷ್ಟ ದೇವರ ಹೆಸರು ಎಲ್ಲವೂ ಕಾನೂನು ಬಾಹಿರವಾಗುತ್ತೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸುವ ಹಾಗೂ ಪ್ರಚಾರ ಮಾಡುವ ಕೆಲಸ ಆರ್’ಟಿಓ ಇಲಾಖೆ ಮಾಡಿದೆ. ಜೊತೆಗೆ 3 ವರ್ಷದಲ್ಲಿ ಹಲವು ಪ್ರಕರಣ ದಾಖಲು ಮಾಡಿದ್ದೇವೆ. ವಾಹನಗಳ ಮೇಲೆ ಬೇರೆ ಬೇರೆ ಬರಹಗಳನ್ನ ಬರೆಯುತ್ತಿದ್ದಾರೆ. ಯಾರೂ ಸಹ ಅನವಶ್ಯಕ ಬರಹಗಳನ್ನ ವಾಹನಗಳ ಮೇಲೆ ಹಾಕಬಾರದು ಎಂದು ಮಾಹಿತಿ ನೀಡಲಾಗಿದೆ.