ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ, ವಿಶ್ವಗುರು ಬಸವಣ್ಣನವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದರೆ ಹುಷಾರ್ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, ನಿಮ್ಮ ಬಾಯಿಗೆ ನೀವೇ ಬೀಗ ಹಾಕಿಕೊಂಡರೆ ಒಳ್ಳೆಯದು, ಇಲ್ಲದೆ ಹೋದರೆ ನಾವೇ ಬೀಗ ಹಾಕುತ್ತೇವೆ. ವಿಶ್ವಗುರು ಬಸವಣ್ಣನವರು ಹೊಳೆಗೆ ಹಾರಿ ಸತ್ತರು ಎಂದು ಹೇಳುತ್ತೀರಿ.
ಇನ್ನೊಂದು ಕಡೆ ವೀರಶೈವ ಮಹಾಸಭಾ ಅಂದರೆ ಭೀಮಣ್ಣ ಖಂಡ್ರೆ, ಬಿ.ಎಸ್. ಯಡಿಯೂರಪ್ಪ, ಶಾಮನವರು ಶಿವಶಂಕರಪ್ಪ ಎನ್ನುತ್ತೀರಿ. ಅಖಿಲ ಭಾರತ ವೀರಶೈವ ಮಹಾಸಭಾ ಅಂದರೆ ಏನೆಂದುಕೊಂಡಿದ್ದೀರಿ ಎಂದು ಕಿಡಿ ಕಾರಿದ್ದಾರೆ.