ಭಾರತದ ಚಿತ್ರಣ ಬದಲಾಯಿಸಿದವರು ಸ್ವಾಮಿ ವಿವೇಕಾನಂದ: ಶ್ರೀನಿವಾಸ್ ಬಳ್ಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಜಗತ್ತು ಭಾರತವನ್ನು ಭಿಕ್ಷುಕರ ನಾಡು, ಅನಕ್ಷರಸ್ಥ ನಾಡು ಎಂದು ಕೀಳಾಗಿ ಕಾಣುತ್ತಿರುವ ಚಿತ್ರಣವನ್ನು ಬದಲಾಯಿಸಿದವರು ಸ್ವಾಮಿ ವಿವೇಕಾನಂದರು. ಇದು ಸ್ವಾತಂತ್ರ್ಯ ಸಂಗ್ರಾಮ ಮೇಲೆ ಗಾಢ ಪರಿಣಾಮ ಬೀರಿತು. ವಿವೇಕಾನಂದರ ವಿಚಾರ ಇಟ್ಟುಕೊಂಡು ಸಮರ್ಥ ಭಾರತ ಸಂಚಲನ ಮೂಡಿಸುತ್ತಿದೆ ಎಂದು ಬೆಂಗಳೂರು ನೃಪತುಂಗ ವಿಶ್ವವಿದ್ಯಾಲಯ ಉಪಕುಲಪತಿ ಶ್ರೀನಿವಾಸ್ ಬಳ್ಳಿ ಹೇಳಿದರು.

ಸಮರ್ಥ ಭಾರತ ಮತ್ತು ಮಿಥಿಕ್ ಸೊಸೈಟಿ ಸಹಭಾಗಿತ್ವದಲ್ಲಿ ‘ಬಿ ಗುಡ್ ಡು ಗುಡ್’ ಅಭಿಯಾನದ ಅಂಗವಾಗಿ ‘ಸ್ವಾತಂತ್ರ್ಯ ಸಂಗ್ರಾಮದ ಮೇಲೆ ಸ್ವಾಮಿ ವಿವೇಕಾನಂದರ ವಿಚಾರಗಳ ಪ್ರಭಾವ’ ಎಂಬ ವಿಷಯದ ಕುರಿತು ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಿಸಿ ಮಾತನಾಡಿದರು.

ಯಾವಾಗಲೂ ಒಳ್ಳೆದನ್ನೇ ವಿಚಾರ ಮಾಡುತ್ತಾ ಹೋಗುತ್ತಿದ್ದರೆ, ಅದೇ ವಿಚಾರವು ನಮ್ಮ ವೈಯಕ್ತಿಕ ವಿಚಾರವಾಗಿ ಬೆಳೆಯುತ್ತದೆ. ಅದನ್ನು ಬೇರೆಯವರಿಗೆ ಹಂಚಿಕೊಂಡಾಗ ಹೆಚ್ಚಿನ ಖುಷಿ ಸಿಗುತ್ತದೆ. ಒಳ್ಳೆಯ ಕೆಲಸ ಮಾಡುವುದು ರಕ್ತಗತವಾದಾಗ ಇಂದಿನ ಅನೇಕ ಸಮಸ್ಯೆ ಪರಿಹಾರ ಸಿಗುತ್ತದೆ. ನಾವು ಸರಿಯಾದ ದಾರಿಯಲ್ಲಿ ಯಾರಿಗೂ ಹೆದರೂ ಆವಶ್ಯಕತೆ ಇಲ್ಲ. ನೈತಿಕ ಮೌಲ್ಯಗಳು ಇಲ್ಲದೇ ಸಂಪತ್ತಿನಲ್ಲಿ ಖುಷಿ ಇಲ್ಲ. ಸೇವೆ, ಅನುಭವ ಮಕ್ಕಳ ಮೌಲ್ಯದ ಹೆಚ್ಚಿಸುವ ರಾಯಭಾರಿಗಳಾಗಬೇಕು. ಇದರಿಂದ ಸಮರ್ಥ ಭಾರತ ಕಟ್ಟಲು ಸಹಾಯವಾಗಲಿದೆ ಎಂದವರು ಹೇಳಿದರು.

ಕರಕುಶಲ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೇಶಕಿ ಡಿ. ರೂಪ ಮೌದ್ಗಿಲ್ ಮಾತನಾಡಿ, ಮನಸ್ಸು ಮಿತ್ರವೂ, ಶತ್ರು ಆಗಿದೆ ಅದನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕಾಗಿದೆ. ಭಗವದ್ಗೀತೆಯಲ್ಲಿ ಎಲ್ಲವೂ ಅಡಕವಾಗಿದೆ, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ದಿ ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ವಿ. ನಾಗರಾಜ್ ಅವರು, ಮೂರು ವರ್ಷಗಳಿಂದ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಮಕ್ಕಳಲ್ಲಿ ಭರವಸೆ ಮೂಡಿಸಿದೆ ಎಂದರು.

ರಾಜ್ಯ ಮಟ್ಟದ ಪ್ರಬಂಧ ಸ್ವರ್ಧೆಯ ವಿಜೇತರು:
ಪ್ರಥಮ – ಹೊಸದುರ್ಗದ ಪನ್ನಗ ಪಿ. ರಾಯ್ಕರ್
ದ್ವಿತೀಯ – ಮಂಗಳೂರಿನ ರೆಶೆಲ್ ಬ್ರೆಟ್ನಿ ಫೆರ್ನಾಂಡೀಸ್
ತೃತೀಯ – ಮೈಸೂರಿನ ಗೋಕುಲಂ ಅಖಿಲೇಶ್ ಸುರೇಶ್ ವಿದ್ಯಾವಸ್ತು

ಸಮಾಧಾನಕರ ಬಹುಮಾನಗಳು:
ಬೆಂಗಳೂರಿನ ಸೌಂದರ್ಯ. ಎಸ್, ಬಸವನಬಾಗೇವಾಡಿಯ ಶ್ರುತಿ ವಿಶ್ವಾಸ್ ಗಾಯಕ್ವಾಡ್, ಬೆಂಗಳೂರಿನ ಅಂಜನಾನಗರ ಅಕ್ಷತಾ ಎ.ಆರ್, ರಾಜಾಜಿನಗರದ ರೋಜ ಕೆ.ಎಸ್, ತುಮಕೂರಿನ ಅಭಿಷೇಕ್ ಎಂ.ವಿ., ಮಂಗಳೂರಿನ ಶುಭಶ್ರೀ, ಕುಂದಾಪುರದ ಲಕ್ಷ್ಮೀ, ಕಲಬುರಗಿಯ ಅಂಬ್ರೇಶ ಉದಯಕುಮಾರ ಇಟಗಿಕರ್, ಗದಗನ ಪರವೀನ್ ನೈಕರ್, ಶಿವಮೊಗ್ಗ ಶಿಕಾರಿಪುರದ ಸಿಂಧೂರಾಣಿ ಕೆ.ಆರ್., ತುಮಕೂರು ಸೈದಾ ಹಾನಿಯ, ಕೊಪ್ಪಳ ಗಂಗಾವತಿಯ ಅನಿಲ್ ಕುಮಾರ್ ರೆಡ್ಡಿ, ಚಿತ್ರದುರ್ಗದ ಅಪೂರ್ವ ಎಸ್., ಬಸವನಗುಡಿಯ ನಯನಾ.ಎಸ್, ಕಲಬುರಗಿಯ ಚೇತನ್ ಎಚ್.ದೇಶಪಾಂಡೆ, ಪುತ್ತೂರಿನ ಪ್ರಜ್ವಲ್ ಆರ್. ಶೇಖ, ತುಮಕೂರು ಅಭಿಷೇಕ್ ಕೆ.ಟಿ., ಉಡುಪಿ ಮಣಿಪಾಲದ ಪಲ್ಲವಿ ಎಸ್., ಬಳ್ಳಾರಿಯ ಗುರುಪ್ರಸಾದ್ ಪಂಡಿತ್ ಮತ್ತು ದಾವಣಗೆರೆಯ ನವೀನ್ ಕೆ.ಆರ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!