ನನ್ನ ಪ್ರತಿಯೊಬ್ಬ ಸಹೋದರಿಯು ಸಂತೋಷವಾಗಿರಿ: ಸಿಲಿಂಡರ್ ದರ ಕಡಿತ ಬೆನ್ನಲ್ಲೇ ಖುಷಿ ಹಂಚಿಕೊಂಡ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  

ಕೇಂದ್ರ ಸರಕಾರ ಇಂದು ಅಡುಗೆ ಅನಿಲ ಸಿಲಿಂಡರ್ ಗಳ ಬೆಲೆಯಲ್ಲಿ ಕಡಿತಗೊಳಿಸಿದ್ದು, ಈ ಮೂಲಕ ಮಹಿಳೆಯರ ಸೌಕರ್ಯ ಹೆಚ್ಚಿಸಿ ಜೀವನವನ್ನು ಸುಲಭಗೊಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕೇಂದ್ರ ಸರ್ಕಾರ ಮಂಗಳವಾರ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್ ನಲ್ಲಿ 400 ರೂ ಸಬ್ಸಿಡಿ ಘೋಷಣೆ ಮಾಡಿದ್ದು, ಉಜ್ವಲ ಯೋಜನೆಯಡಿಯಲ್ಲಿ ಇರುವವರಿಗೆ ರೂ.400 ಕಡಿಮೆ ಬೆಲೆಗೆ ಗ್ಯಾಸ್ ಸಿಲಿಂಡರ್ ಸಿಗಲಿದೆ. ಉಜ್ವಲ ಯೋಜನೆ ಫಲಾನುಭವಿಗಳಲ್ಲದವರಿಗೆ 200 ರೂ ಕಡಿಮೆ ದರದ ಸಿಲಿಂಡರ್ ಸಬ್ಸಿಡಿ ದೊರೆಯಲಿದೆ ಎಂದು ಹೇಳಿದೆ.

ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ,’ರಕ್ಷಾ ಬಂಧನದ ಹಬ್ಬವು ಕುಟುಂಬದಲ್ಲಿ ಸಂತೋಷವನ್ನು ಹೆಚ್ಚಿಸುವ ದಿನವಾಗಿದೆ. ಗ್ಯಾಸ್ ಬೆಲೆಯಲ್ಲಿನ ಇಳಿಕೆಯು ನನ್ನ ಕುಟುಂಬದಲ್ಲಿನ ಸಹೋದರಿಯರ ಸೌಕರ್ಯವನ್ನು ಹೆಚ್ಚಿಸುತ್ತದೆ ಮತ್ತು ಅವರ ಜೀವನವನ್ನು ಸುಲಭಗೊಳಿಸುತ್ತದೆ. ನನ್ನ ಪ್ರತಿಯೊಬ್ಬ ಸಹೋದರಿಯು ಸಂತೋಷವಾಗಿರಿ, ಆರೋಗ್ಯವಾಗಿರಿ, ಇದು ದೇವರಿಂದ ನನ್ನ ಹಾರೈಕೆ’ ಎಂದು ಟ್ವೀಟ್ ಮಾಡಿದ್ದಾರೆ.

ಸರ್ಕಾರದ ಗ್ಯಾಸ್ ಸಿಲಿಂಡರ್ ದರ ಕಡಿತ ಕ್ರಮವು ಬುಧವಾರದಿಂದ ಜಾರಿಗೆ ಬರಲಿದೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!