Monday, September 25, 2023

Latest Posts

ರಾಖಿ ಹಬ್ಬದ ಸಮಯ ಸಹೋದರಿಯರಿಗೆ ಪ್ರಧಾನಿ ಉಡುಗೊರೆ: LPG ದರ ಕಡಿತಕ್ಕೆ ಬಿಜೆಪಿ ಖುಷ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  

ಕೇಂದ್ರ ಸರಕಾವು ಎಲ್‌ಪಿಜಿ ಸಿಲಿಂಡರ್‌ಗೆ 200 ರೂಪಾಯಿ ಕಡಿತಗೊಳಿಸಿದ್ದು, ಜೊತೆಗೆಗೃಹಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಮೇಲೆ 200 ರೂ. ಸಬ್ಸಿಡಿ ನೀಡುವುದಾಗಿ ತಿಳಿಸಿದೆ. ಈ ಘೋಷಣೆಯ ಬೆನ್ನಲ್ಲೇ ಬಿಜೆಪಿ ನಾಯಕರು ಪ್ರಧಾನಿ ಮೋದಿ ಸರಕಾರದ ನಡೆಗೆ ಸಂತಸ ಹಂಚಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಪ್ರತಿ ಗ್ಯಾಸ್ ಸಿಲಿಂಡರ್‌ಗೆ 200 ರೂಪಾಯಿ ಸಬ್ಸಿಡಿ ನೀಡಲು ಮತ್ತು 75 ಲಕ್ಷ ಹೆಚ್ಚುವರಿ ಉಜ್ವಲ ಸಂಪರ್ಕಗಳಿಗೆ ಅನುಮೋದನೆ ನೀಡುವುದು ಪ್ರಧಾನಿಯವರ ಐತಿಹಾಸಿಕ ನಿರ್ಧಾರವಾಗಿದೆ. ಇದು ಉತ್ತರದಲ್ಲಿ 1.75 ಕೋಟಿಗೂ ಹೆಚ್ಚು ಫಲಾನುಭವಿಗಳು ಸೇರಿದಂತೆ 10.35 ಕೋಟಿ ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ ಎಂದಿದ್ದಾರೆ.

ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರತಿಕ್ರಿಯಿಸಿದ್ದು, ರಾಖಿ ಹಬ್ಬದ ಸಮಯದಲ್ಲಿ ಸಹೋದರಿಯರಿಗೆ ಪ್ರಧಾನಿ ಉಡುಗೊರೆ ನೀಡಿದ್ದಾರೆ. ಪ್ರಧಾನಿ ಮೋದಿಯವರಿಗೆ ನನ್ನ ಕೃತಜ್ಞತೆಯನ್ನು ಹೇಳುತ್ತೇನೆ. ಹಬ್ಬದ ಸಂದರ್ಭ ಉಡುಗೊರೆ ನಿರೀಕ್ಷೆಯಲ್ಲಿದ್ದ ಸಹೋದರಿಯರಿಗೆ ಇದೇನು ಸಾಧಾರಣ ಉಡುಗೊರೆಯಲ್ಲ ಎಂದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಚಿವ ಸಿ.ಟಿ ರವಿ,’ಗೃಹ ಬಳಕೆ ಎಲ್‌ಪಿಜಿ ಬೆಲೆ ಪ್ರತಿ ಸಿಲಿಂಡರ್ ಮೇಲೆ ₹ 200 ಇಳಿಕೆ – ಪ್ರಧಾನಿ ಮೋದಿಯವರಿಂದ ರಕ್ಷಾ ಬಂಧನದ ಉಡುಗೊರೆ. ರಕ್ಷಾಬಂಧನ ಹಾಗೂ ಓಣಂ ಹಬ್ಬದ ಉಡುಗೊರೆಯಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಸರಕಾರವು ಗೃಹ ಬಳಕೆ ಎಲ್ ಪಿ ಜಿ ಸಿಲಿಂಡರ್ ನ ಬೆಲೆಯನ್ನು ಪ್ರತಿ ಸಿಲಿಂಡರ್ ಗೆ ₹ 200 ಕಡಿಮೆ ಮಾಡುವ ನಿರ್ಧಾರ ತೆಗೆದುಕೊಂಡಿದೆ’ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!